ಸಮರಸ ಚಿತ್ರಸುದ್ದಿ: ಕಾಸರಗೋಡು: ಬೇಕಲ ತಲ್ಲಾಣಿ ಶ್ರೀ ಲಕ್ಷ್ಮೀನಾರಾಯಣ, ಅಮ್ಮನವರ 30ನೇ ಪ್ರತಿಷ್ಠೆ ವಾರ್ಷಿಕೋತ್ಸವದ ಅಂಗವಾಗಿ ಕುಟುಂಬದ ಹಾಗೂ ಸಮಾಜದ 11 ವಟುಗಳಿಗೆ ಸಾಮೂಹಿಕ ಬ್ರಹ್ಮೋಪದೇಶ ನಡೆಯಿತು. ಕಾರ್ಯಕ್ರಮದ ಅಂಗವಾಗಿ ಅರ್ಧ ಏಕಾಹ ಭಜನೆ, ಸಮಾಜದ ಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮ, ಗಣಪತಿ ಹೋಮ, ನಾಗ, ವಿಷ್ಣುಮೂರ್ತಿ, ಧೂಮಾವತಿ ತಂಬಿಲಗಳು, ಹುಲ್ಪೆ ಸಮರ್ಪಣೆ, ಮುಡಿಪು ಪೂಜೆ, ಶ್ರೀ ಲಕ್ಷ್ಮೀ ನಾರಾಯಣ, ಅಮ್ಮನವರ ವಾರ್ಷಿಕ ಪೂಜೆ, ವಿದ್ಯಾರ್ಥಿ ವೇತನ ವಿತರಣೆ, ಗುಳಿಗ ತಂಬಿಲ ಹಾಗೂ ಅನ್ನ ಪ್ರಸಾದ ವಿತರಣೆಯೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.

.jpg)
