ಮಂಜೇಶ್ವರ: ಹೊಸಂಗಡಿಯ ಕಾರಣಿಕ ಕ್ಷೇತ್ರವಾದ ಶ್ರೀ ಅಯ್ಯಪ್ಪ ಕ್ಷೇತ್ರದ ಸೇವಾ ಸಮಿತಿಯ ಮಹಾಸಭೆ ಹೊಸಂಗಡಿ ಶ್ರೀ ಅಯ್ಯಪ್ಪ ಕ್ಷೇತ್ರದಲ್ಲಿ ನಿಕಟಪೂರ್ವ ಅಧ್ಯಕ್ಷ ಪದ್ಮನಾಭ ಕಡಪ್ಪರ ಅವರ ಅಧ್ಯಕ್ಷತೆಯಲ್ಲಿ ಜರಗಿತು. ಕಾರ್ಯದರ್ಶಿಯಾದ ಆದರ್ಶ್ ಬಿ.ಎಂ. ವರದಿ ವಾಚಿಸಿದರು. ಕೋಶಾಧಿಕಾರಿ ರಮೇಶ್ ಕಟ್ಟೆ ಬಜಾರ್ ಲೆಕ್ಕಪತ್ರ ಮಂಡಿಸಿದರು.
ಈ ಸಂದರ್ಭದಲ್ಲಿ ಕ್ಷೇತ್ರದ ಅರ್ಚಕ ತಿರುಮಲೇಶ್ ಆಚಾರ್ಯ, ಕ್ಷೇತ್ರ ಗುರುಸ್ವಾಮಿ ಉದಯ ಪಾವಳ ಮುಂತಾದವರು ಉಪಸ್ಥಿತರಿದ್ದರು. ಸಮಿತಿ ಗೌರವಾಧ್ಯಕ್ಷರಾಗಿ ಪದ್ಮನಾಭ ಕಡಪ್ಪರ ಆಯ್ಕೆಯಾದರು.
ನೂತನ ಸಮಿತಿ ಅಧ್ಯಕ್ಷರಾಗಿ ನ್ಯಾಯವಾದಿ ನವೀನ್ ರಾಜ್ ಕೆ.ಜೆ. ಆಯ್ಕೆಯಾದರು. ಪ್ರಧಾನ ಕಾರ್ಯದರ್ಶಿಯಾಗಿ ದೇವರಾಜ್ ಎಂ.ಎಸ್, ಕೋಶಾಧಿಕಾರಿಯಾಗಿ ಸುನಿಲ್ ಕುಮಾರ್ ಗಾಣಿಗ, ಉಪಾಧ್ಯಕ್ಷರುಗಳಾಗಿ ಕೃಷ್ಣಾ ಜಿ.ಮಂಜೇಶ್ವರ್, ಚಂದ್ರಹಾಸ ಪೆಲಪಾಡಿ, ನಂದೀಶ್ ಯಾನೆ ನಂದ ಹೆಗ್ಡೆ ಆಯ್ಕೆಯಾದರು. ಜೊತೆ ಕಾರ್ಯದರ್ಶಿಗಳಾಗಿ ಶಿವಪ್ರಸಾದ್ ಪೆಲಪಾಡಿ, ಸುರೇಶ್ ಗಾಣಿಂಜಲ್ ಆಯ್ಕೆಯಾದರು. ಇತರ 25 ಮಂದಿಯನ್ನು ಒಳಗೊಂಡ ಸಮಿತಿಯನ್ನು ರಚಿಸಲಾಯಿತು. ಸಭೆಯಲ್ಲಿ ಆದರ್ಶ್ ಬಿ.ಎಂ. ಸ್ವಾಗತಿಸಿ, ದೇವರಾಜ್ ಎಂ.ಎಸ್. ವಂದಿಸಿದರು.

-NAVEENRAJ%20K%20J.jpg)
