ಸಮರಸ ಚಿತ್ರಸುದ್ದಿ: ಕಾಸರಗೋಡು: ಹನ್ನೆರಡನೇ ವೇತನ ಪರಿಷ್ಕರಣೆ ಶೀಘ್ರವೇ ಜಾರಿಗೊಳಿಸಬೇಕೆಂದು ಆಗ್ರಹಿಸಿ ಕೇರಳ ಎನ್‍ಜಿಒ ಸಂಘ್ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಕಾಸರಗೋಡು ಸಿವಿಲ್ ಸ್ಟೇಶನ್ ಪರಿಸರದಲ್ಲಿ ನಿರಾಹಾರ ಸತ್ಯಾಗ್ರಹ ನಡೆಯಿತು.
ಎನ್‍ಜಿಒ ಸಂಘ್ ರಾಜ್ಯ ನಿರ್ವಾಹಕ ಸಮಿತಿ ಸದಸ್ಯ ಪಿ.ಪಿತಾಂಬರನ್ ಉದ್ಘಾಟಿಸಿದರು. ಜಿಲ್ಲಾ ಅಧ್ಯಕ್ಷ ಕೆ.ರಂಜಿತ್ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಕಾರ್ಯದರ್ಶಿ ಸುನಿಲ್ ಪಿ.ಸಿ. ಸ್ವಾಗತಿಸಿದರು. ರವಿ ಕುಮಾರ್ ಕೆ, ರವೀಂದ್ರನ್, ರಘುನಾಥ್, ಸಂತೋಷನ್, ತುಳಸೀಧರನ್, ರಂಜೀವ್ ರಾಘವನ್ ಮಾತನಾಡಿದರು. ರಾಜೇಶ್ ನೆಕ್ರಾಜೆ ವಂದಿಸಿದರು.

