ಪಾಲಕ್ಕಾಡ್: ರಾಜ್ಯದಲ್ಲಿ ನಿಪಾ ಬಾಧಿಸಿ ನಿನ್ನೆ ಮತ್ತೊಬ್ಬರು ಮೃತಪಟ್ಟಿದ್ದಾರೆ. ಈ ಬಳಿಕ ಆರೋಗ್ಯ ಇಲಾಖೆ ಕಟ್ಟೆಚ್ಚರದಲ್ಲಿದೆ. ನಿಪಾ ಸೋಂಕಿಗೆ ಒಳಗಾದ ಮನ್ನಾಕ್ರ್ಕಾಡ್ ನಿವಾಸಿಯ ಮನೆಯ ಮೂರು ಕಿ.ಮೀ ವ್ಯಾಪ್ತಿಯಲ್ಲಿ ನಿರ್ಬಂಧ ವಿಧಿಸಲಾಗಿದೆ.
ಕಂಟೈನ್ಮೆಂಟ್ ವಲಯಗಳನ್ನು ಘೋಷಿಸಲಾಗುವುದು. ಪೆರಿಂದಲ್ಮಣ್ಣಾದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದ ಪಾಲಕ್ಕಾಡ್‍ನ ಕುಮಾರಂಪುತೂರಿನ 58 ವರ್ಷದ ವ್ಯಕ್ತಿಯ ಸಂಪರ್ಕ ಪಟ್ಟಿಯಲ್ಲಿದ್ದ ಜನರನ್ನು ಕ್ವಾರಂಟೈನ್‍ಗೆ ಹೋಗಲು ತಿಳಿಸಲಾಗಿದೆ.
ಮೃತ ಕುಮಾರಂಪುತ್ತೂರಿನ ನಿವಾಸಿಗೆ ನಿಪಾ ಸೋಂಕು ದೃಢಪಡಿಸಿದ ವರದಿ ನಿನ್ನೆ ರಾತ್ರಿ ಬಂದಿದೆ. ನಿಪಾ ಸೋಂಕಿಗೆ ಕೋಝಿಕ್ಕೋಡ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪಾಲಕ್ಕಾಡ್‍ನ ತಚನಟ್ಟುಕರ ಮೂಲದ ಮಹಿಳೆಯ ಸ್ಥಿತಿ ಗಂಭೀರವಾಗಿದೆ.





