ಮಂಜೇಶ್ವರ: ಸಾರ್ವಜನಿಕ ಮಂಜೇಶ್ವರ ಶ್ರೀ ಗಣೇಶೋತ್ಸವ ಸಮಿತಿ ಆಶ್ರಯದಲ್ಲಿ ಹೊಸಂಗಡಿ ಶ್ರೀ ಅಯ್ಯಪ್ಪ ಕ್ಷೇತ್ರದಲ್ಲಿ ಜರಗಲಿರುವ 45 ನೇ ವರ್ಷದ ಸಾರ್ವಜನಿಕ ಮಂಜೇಶ್ವರ ಗಣೇಶೋತ್ಸವದಲ್ಲಿ ಪೂಜಿಸಲ್ಪಡುವ ಶ್ರೀ ಮಹಾಗಣಪತಿ ದೇವರ ವಿಗ್ರಹ ಮುಹೂರ್ತವು ಹೊಸಂಗಡಿ ಶ್ರೀ ಅಯ್ಯಪ್ಪ ಕ್ಷೇತ್ರದಲ್ಲಿ ವೈದಿಕ ವಿಧಿವಿದಾನಗಳೊಂದಿಗೆ ಶುಕ್ರವಾರ ನಡೆಯಿತು.
ಕಾರ್ಯಕ್ರಮದಲ್ಲಿ ಸಮಿತಿಯ ಗೌರವಧ್ಯಕ್ಷ ಹೈಮೇಶ್ ಬಿ.ಎಂ, ಅಧ್ಯಕ್ಷ ಪದ್ಮನಾಭ ಕಡಪ್ಪರ, ಪ್ರಧಾನ ಕಾರ್ಯದರ್ಶಿ ಅವಿನಾಶ್ ಹೆಗ್ಡೆ ಮಂಜೇಶ್ವರ, ಕೋಶಾಧಿಕಾರಿ ನವೀನ್ ಅಡಪ ಹೊಸಬೆಟ್ಟು, ಪ್ರಧಾನ ಸಂಚಾಲಕ, ಕ್ಷೇತ್ರದ ಅಧ್ಯಕ್ಷ ನವೀನ್ ರಾಜ್ ಕೆ.ಜೆ, ಸಂಘಟನಾ ಕಾರ್ಯದರ್ಶಿ ಹರೀಶ್ ಶೆಟ್ಟಿ ಮಾಡ, ಕ್ಷೇತ್ರದ ಗುರುಸ್ವಾಮಿ ಉದಯ ಪಾವಳ, ಪ್ರಧಾನ ಅರ್ಚಕ ತಿರುಮಲೇಶ್ ಆಚಾರ್ಯ ಹೊಸಂಗಡಿ, ವಿಗ್ರಹ ಸೇವಾ ಕರ್ತೃ ಕಿರಣ್ ಶೆಟ್ಟಿ ಉದ್ಯಾವರ ಮಾಡ ದಂಪತಿಗಳು, ಸಮಿತಿ ಪದಾಧಿಕಾರಿಗಳಾದ ದಿನಕರ ಬಿ.ಎಂ, ಕೃಷ್ಣ ಜಿ. ಮಂಜೇಶ್ವರ, ನವೀನ್ ಕೌಡೂರು, ಪದ್ಮನಾಭ ಬಾಡೂರು, ರಮೇಶ್ ಹೊಸಂಗಡಿ, ಭಾಸ್ಕರ ಹೊಸಂಗಡಿ, ಭಾಸ್ಕರ ಅಂಗಡಿಪದವು, ಶಿವಪ್ರಸಾದ್ ಪೆಲಪ್ಪಾಡಿ, ಚಂದ್ರಹಾಸ ಪೆಲಪ್ಪಾಡಿ, ನರೇಂದ್ರ ಹೆಗ್ಡೆ, ಹೊಸಂಗಡಿ ಶ್ರೀ ಅಯ್ಯಪ್ಪ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ದೇವರಾಜ್ ಎಂ.ಎಸ್, ಕೋಶಾಧಿಕಾರಿ ಸುನಿಲ್ ಕುಮಾರ್ ಗಾಣಿಗ ಮೊದಲಾದವರು ಪಾಲ್ಗೊಂಡರು. ವಿಗ್ರಹ ರಚಣೆಯನ್ನು ಶಿಲ್ಪಿ ಮಹೇಶ್ ಆಚಾರ್ಯ ಬಾಯಾರು ನಿರ್ಮಿಸುತ್ತಿದ್ದು, ಈ ಬಾರಿಯ ವಿಗ್ರಹ ಸೇವೆಯನ್ನು ಧಾರ್ಮಿಕ, ಸಾಮಾಜಿಕ, ಮುಂದಾಳು, ಕೊಡುಗೈದಾನಿ ಕಿರಣ್ ಶೆಟ್ಟಿ ಉದ್ಯಾವರ ಮಾಡ ಮನೆಯವರು ಸಮರ್ಪಿಸುವರು. ಈ ಬಾರಿಯ ಮಂಜೇಶ್ವರ ಶ್ರೀ ಗಣೇಶೋತ್ಸವವು ಆಗಸ್ಟ್ 27 ರಿಂದ ಮೊದಲ್ಗೊಂಡು 30 ರ ವರೆಗೆ ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ.

.jpg)
.jpg)
