ಬದಿಯಡ್ಕ: ಆಲ್ ಕೇರಳ ಲೈಸೆನ್ಸ್‍ಡ್ ವಯರ್‍ಮೇನ್ ಅಸೋಸಿಯೇಶನ್‍ನ 53ನೇ ಸ್ಥಾಪಕ ದಿನದ ಅಂಗವಾಗಿ ಬದಿಯಡ್ಕ ಘಟಕದ ವತಿಯಿಂದ ಸ್ಥಾಪಕ ದಿನಾಚರಣೆಯನ್ನು ಸೋಮವಾರ ಆಚರಿಸಲಾಯಿತು. ಬದಿಯಡ್ಕ ಬಸ್ಸುತಂಗುದಾಣದ ಪರಿಸರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಘಟಕ ಅಧ್ಯಕ್ಷ ಭಾಸ್ಕರ ಪಿಲಾಂಕಟ್ಟೆ ಅಧ್ಯಕ್ಷತೆಯಲ್ಲಿ ಧ್ವಜಾರೋಹಣ ನಡೆಯಿತು. ಅವರು ಮಾತನಾಡಿ ಸಂಘಟನೆಯ ವತಿಯಿಂದ ಮೂರು ಮನೆಗಳಿಗೆ ಉಚಿತವಾಗಿ ವಿದ್ಯುತ್ ಅಳವಡಿಸಲು ಸಹರಿಸಿರುತ್ತೇವೆ. ಸದಸ್ಯರ ಆರೋಗ್ಯದ ಬಗ್ಗೆ ಕಾಳಜಿಯನ್ನಿಟ್ಟು ಧನಸಹಾಯವನ್ನು ವಿತರಿಸಲಾಗಿದೆ. ಸಂಘಟನೆಯನ್ನು ಬಲಪಡಿಸಲು ಎಲ್ಲರೂ ಏಕಮನಸ್ಸಿನಿಂದ ಒಂದುಗೂಡಬೇಕು ಎಂದು ಕರೆಯಿತ್ತರು.
ಘಟಕದ ಉಪಾಧ್ಯಕ್ಷ ಗಣೇಶ್ ಭಟ್ ಕಡಪ್ಪು, ವಿನೋದ್ ಮುನಿಯೂರು, ಮಜೀದ್ ಪಾಡ್ಲಡ್ಕ, ಕಮಾಲ್ ಬದಿಯಡ್ಕ ಹಾಗೂ ಸದಸ್ಯರು ಪಾಲ್ಗೊಂಡಿದ್ದರು. ಕಾರ್ಯದರ್ಶಿ ಅಶ್ರಫ್ ಎಂ.ಎಂ. ಮೂಕಂಪಾರೆ ಸ್ವಾಗತಿಸಿ, ಕೋಶಾಧಿಕಾರಿ ಶಿವಪ್ರಸಾದ್ ಮೈರ್ಕಳ ವಂದಿಸಿದರು.

.jpg)
