ಉಪ್ಪಳ: ಕಾಸರಗೋಡು ಜಿಲ್ಲಾ ಮೊಗೇರ ಸಂಘದ ನೇತೃತ್ವದಲ್ಲಿ ಮಂಗಲ್ಪಾಡಿ ಪಂಚಾಯತಿ ಮೊಗೇರ ಸಮಿತಿ ರೋಪಿಕರಿಸಲಾಯಿತು. ಜಿಲ್ಲಾ ಅಧ್ಯಕ್ಷ ನಿಟ್ಟೋಣಿ ಬಂದ್ಯೋಡು ಅಧ್ಯಕ್ಷತೆ ವಹಿಸಿದರು. ಮದರು ಮಹಾಮಾತೆ ಅಧ್ಯಕ್ಷ ವಸಂತ ಅಜಕೊಡು, ಹರಿರಾಮ ಕುಳೂರು, ಗಿರಿಜಾ ಬಂದ್ಯೋಡು, ಆನಂದ ಬಂದ್ಯೋಡು, ಹರಿಶ್ಚಂದ್ರ ಮಂಗಲ್ಪಾಡಿ, ಗ್ರಾಮ ಪಂಚಾಯತಿ ಸದಸ್ಯ ಬಾಬು ಬಂದ್ಯೋಡು, ರವಿಚಂದ್ರ ಕನ್ನಟ್ಟಿಪಾರೆ, ಜಯ ರಾಮಪ್ಪ, ಸುಂದರಿ ಟೀಚರ್ ಉಪಸ್ಥಿತರಿದ್ದರು.
ಬಂದ್ಯೋಡು ಪರಿಶಿಷ್ಟ ಜಾತಿ ಸಭಾಂಗಣದಲ್ಲಿ ಜರಗಿದ ಸಭೆಯನ್ನು ಜಿಲ್ಲಾ ಮೊಗೇರ ಸಂಘದ ಗೌರವಾಧ್ಯಕ್ಷ ರಾಮಪ್ಪ ಮಂಜೇಶ್ವರ ಉದ್ಘಾಟಿಸಿದರು. ಮಂಗಲ್ಪಾಡಿ ಪಂಚಾಯತಿ ನೂತನ ಮೊಗೇರ ಸಂಘದ ಗೌರವಧ್ಯಕ್ಷರಾಗಿ ಸಂಜೀವ ಸಿರಿಯಾ, ಅಧ್ಯಕ್ಷ ಆನಂದ ಯಂ, ಉಪಾಧ್ಯಕ್ಷರಾಗಿ ಜಯಂತ ಬಂದ್ಯೋಡು, ಸುಂದರ ಸಿರಿಯಾ, ಕಾರ್ಯದರ್ಶಿ ಗೌತಮ್ ಬಂದ್ಯೋಡು, ಜೊತೆ ಕಾರ್ಯದರ್ಶಿ ವಿಶ್ವನಾಥ ಪಿ ಹಾಗೂ ಪುಷ್ಪವತಿ ಬಿ., ಕೋಶಾಧಿಕಾರಿ ಸಂಜೀವ ಬಂದ್ಯೋಡು ಹಾಗೂ ಹನ್ನೊಂದು ಜನರ ಕಾರ್ಯಕಾರಿ ಸಮಿತಿಯನ್ನು ರೂಪೀಕರಿಸಲಾಯಿತು. ಈ ಸಂದರ್ಭದಲ್ಲಿ ಗಡಿನಾಡ ಗಾಯಕಿ ಶುಭಾಷಿಣಿ ಕನ್ನಟ್ಟಿಪಾರೆ ಇವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು. ಜಿಲ್ಲಾ ಕಾರ್ಯದರ್ಶಿ ಗೋಪಾಲ ಡಿ ಸ್ವಾಗತಿಸಿ, ಸುಂದರ ಸುದೆಂಬಳ ವಂದಿಸಿದರು.

.jpg)
