ಕಾಸರಗೋಡು: ಕೆಳ ಬಿದ್ದಿದ್ದ ವಿದ್ಯುತ್ ತಂತಿಯಿಂದ ಆಘಾತಕ್ಕೊಳಗಾಗಿ ಹೈನುಗಾರ ಸಾವನ್ನಪ್ಪಿದ್ದಾರೆ. ಮೃತರನ್ನು ಕೀಳಿಯಡ್ಕ ಮೂಲದ ಕುಂಜುಂಡನ್ ನಾಯರ್ (84) ಎಂದು ಗುರುತಿಸಲಾಗಿದೆ.
ನಿನ್ನೆ ಬೆಳಿಗ್ಗೆ 7 ಗಂಟೆ ಸುಮಾರಿಗೆ ಕೀಳಿಯಡ್ಕ ವಯಲಂಕುಳಿಯಲ್ಲಿ ಈ ಅಪಘಾತ ಸಂಭವಿಸಿದೆ. ಹಸು ಮೇಯಿಸಲು ಹೊಲಕ್ಕೆ ಹೋಗುತ್ತಿದ್ದಾಗ ಅವಘಡ ಸಂಭವಿಸಿದೆ. ಮೊದಲು ಆಘಾತಕ್ಕೊಳಗಾದದ್ದು ಹಸು. ಅದನ್ನು ಉಳಿಸಲು ಪ್ರಯತ್ನಿಸುವಾಗ ಕುಂಜುಂಡನ್ ನಾಯರ್ ಕೂಡ ಆಘಾತಕ್ಕೊಳಗಾದರು. ಕುಂಜುಂಡನ್ ನಾಯರ್ ಅವರ ಹಸು ಕೂಡ ಸಾವನ್ನಪ್ಪಿದೆ.
ಅವರು ಮನೆಗೆ ಹಿಂತಿರುಗದ ಕಾಎಣ, ಅವರ ಪುತ್ರ ಅವರನ್ನು ಹುಡುಕಿದಾಗ ಪ್ರಜ್ಞಾಹೀನ ಸ್ಥಿತಿಯಲ್ಲಿ ಕಂಡುಬಂದರು. ಅವರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಆದರೆ ಉಳಿಸಲು ಸಾಧ್ಯವಾಗಲಿಲ್ಲ. ಪೋಲೀಸರು ಮತ್ತು ಕೆಎಸ್‍ಇಬಿ ಅಧಿಕಾರಿಗಳು ಸ್ಥಳಕ್ಕೆ ತಲುಪಿ ಕ್ರಮ ಕೈಗೊಂಡರು.




