ಕಾಸರಗೋಡು: ಮುಂದೆ ನಡೆಯಲಿರುವ ಜಾತಿ ಗಣತಿಯಲ್ಲಿ ಮಲಬಾರಿನ 60 ಲಕ್ಷ ತೀಯ ಸಮುದಾಯದವರನ್ನು ಪ್ರತ್ಯೇಕ ಸಮುದಾಯವಾಗಿ ಸರ್ಕಾರಿ ದಾಖಲೆಗಳಲ್ಲಿ ಸೇರಿಸಬೇಕೆಂದು ಕೇರಳ ತೀಯ ಮಹಾಸಭಾ ಜಿಲ್ಲಾ ಸಮ್ಮೇಳನ 'ಆರೂಢ-2025' ಸರ್ಕಾರವನ್ನು ಆಗ್ರಹಿಸಿದೆ.
ಕಾಸರಗೋಡಿನ ಉದಯಗಿರಿ ಶ್ರೀ ಹರಿ ಸಭಾಂಗಣದಲ್ಲಿ ನಡೆದ ಸಮ್ಮೇಳನದಲ್ಲಿ ಈ ಬಗ್ಗೆ ಠರಾವು ಮಂಡಿಸಲಾಯಿತು. ಸಂಘಟನೆ ಜಿಲ್ಲಾಧ್ಯಕ್ಷ ಪಿ.ಪಿ ವಿಶ್ವಂಭರ ಪಣಿಕ್ಕರ್ ಧ್ವಜಾರೋಹಣ ನಡೆಸಿದರು. ತೀಯ ಸಮುದಾಯವನ್ನು ಉಪಜಾತಿ ಎಂದು ಪರಿಗಣಿಸಿ ಅವರ ಹಕ್ಕುಗಳನ್ನು ನಿರಾಕರಿಸುವುದು ನ್ಯಾಯ ನಿರಾಕರಣೆಯಾಗಿದೆ. 2026ರ ಜಾತಿ ಜನಗಣತಿಯು ತೀಯ ಸಮುದಾಯಕ್ಕೆ ಕಲ್ಪಿಸಿರುವ ಸವಲತ್ತುಗಳನ್ನು ಪರಿಗಣಿಸಲು ಅಧಿಕಾರಿಗಳು ಸಿದ್ಧರಾಗಬೇಕು. ಸಾಮಾಜಿಕ ನ್ಯಾಯವನ್ನು ನಿರಾಕರಿಸುವ ಧೋರಣೆ ಬದಲಾಯಿಸುವಂತೆ ಒತ್ತಾಯಿಸಲಾಯಿತು.
ಕೃಷ್ಣನ್ ಕಾರ್ನವರ್, ನಾಗೇಶ ಕಾರ್ನವರ್ ಮತ್ತು ಮಂಜು ಕಾರ್ನವರ್ ದೀಪ ಬೆಳಗಿಸಿದರು. ಸಮ್ಮೇಳನವನ್ನು ಲೇಖಕ ಪದ್ಮಶ್ರೀ ಬಾಲನ್ ಪುತ್ತೇರಿ ಉದ್ಘಾಟಿಸಿದರು. ಪಿ.ಪಿ.ವಿಶ್ವಂಭರನ್ ಪಣಿಕರ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಭಾಷಣ ಮಾಡಿದ ರಾಜ್ಯಾಧ್ಯಕ್ಷ ಗಣೇಶ್ ಅರಮಂಗಾನಂ, ಕೇರಳದಲ್ಲಿ ತೀಯಾ ಮಹಾಸಭಾದ ಚಟುವಟಿಕೆಗಳು ಮತ್ತು ಮೀಸಲಾತಿ ಸೇರಿದಂತೆ ತೀಯರಿಗೆ ಲಭ್ಯವಿರುವ ಸವಲತ್ತುಗಳು, ಸಮುದಾಯದ ಹಕ್ಕುಗಳನ್ನು ಸಾಧಿಸಲು ಸಂಘಟನೆ ನಡೆಸುತ್ತಿರುವ ಕಾನೂನು ಹೋರಾಟದ ಬಗ್ಗೆ ಮಾಃಇತಿ ನೀಡಿದರು.
ಉತ್ತರ ಮಲಬಾರ್ ತೀಯಾ ಸಮುದಾಯ ದೇವಾಲಯ ರಕ್ಷಣಾ ಸಮಿತಿಯ ಅಧ್ಯಕ್ಷ ಮತ್ತು ಪೆರಿಯ ಎಸ್‍ಎನ್ ಕಾಲೇಜಿನ ಅಧ್ಯಕ್ಷ ಸಿ. ರಾಜನ್ ಪೆರಿಯ ಅತಿಥಿಯಾಘಿ ಭಾಗವಹಿಸಿದ್ದರು. ಈ ಸಂದರ್ಭ 66 ವರ್ಷಗಳಿಂದ ಅಡ್ಕ ಶ್ರೀ ಭಗವತಿ ದೇವಸ್ಥಾನದ ಆಚಾರ್ಯರಾಗಿ ಸೇವೆ ಸಲ್ಲಿಸುತ್ತಿರುವ ಕೃಷ್ಣನ್ ಕಾರ್ನವರ್ ಅವರನ್ನು ಸನ್ಮಾನಿಸಲಾಯಿತು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ವಿ. ಪ್ರಸಾದ್ ಚಟುವಟಿಕೆ ವರದಿ ಮತ್ತು ಜಿಲ್ಲಾ ಕಾರ್ಯದರ್ಶಿ ಪಿ ಟಿ ಹರಿಹರನ್ ನಿರ್ಣಯ ಮಂಡಿಸಿದರು. ಸಮಾಜದ ವಿವಿಧ ಕ್ಷೇತ್ರಗಳಲ್ಲಿ ತಮ್ಮ ಅಸ್ತಿತ್ವವನ್ನು ಸಾಬೀತುಪಡಿಸಿದ ಸಮುದಾಯದ ಗಣ್ಯ ವ್ಯಕ್ತಿಗಳಾದ ರಾಮನ್ ಗುರುಸ್ವಾಮಿ ಉದಯಗಿರಿ, ಡಾ. ಶೋಭಾ ಕಾಸರಗೋಡು, ಡಾ. ಅಕ್ಷಯ್ ಪ್ರಭಾಕರನ್, ಬಿಂದು, ಟಿ.ವಿ. ಶೀಬಾ ಅವರನ್ನು ಗೌರವಿಸಲಾಯಿತು. ಮಧೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಗೋಪಾಲಕೃಷ್ಣನ್, ಸಂಘಟನಾ ಸಮಿತಿ ಅಧ್ಯಕ್ಷ ಎನ್.ಸತೀಶ್, ರಾಜ್ಯ ಸಂಯೋಜಕ ಗಣೇಶ್ ಮಾವಿನಕಟ್ಟಾ, ಪುತ್ತಿಗೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಜಯಂತಿ ಪೆÇನ್ನಂಗಾಲ, ಮಧೂರು ಗ್ರಾಮ ಪಂಚಾಯಿತಿ ಸದಸ್ಯೆ ಸ್ಮಿತಾ ಸುಧಾಕರನ್ ಮೊದಲಾದವರು ಉಪಸ್ಥೀತರಿದ್ದರು. ಜಿಲ್ಲಾ ಖಜಾಂಚಿ ಟಿ.ವಿ. ರಾಘವನ್ ಧನ್ಯವಾದ ಅರ್ಪಿಸಿದರು.




