ಕಾಸರಗೋಡು : ಕಾಳ್ಯಂಗಾಡು ಶ್ರೀ ಮೂಕಾಂಬಿಕಾ ಕ್ಷೇತ್ರದಲ್ಲಿ ಶಿಲಾಮಯ ಗರ್ಭಗುಡಿ ನಿರ್ಮಾಣದ ಸಿದ್ಧತೆ ಭರದಿಂದ ಸಾಗುತ್ತಿದ್ದು, ತದಂಗವಾಗಿ ಬುಧವಾರ ಪಾದುಕಾನ್ಯಾಸ ನಡೆಯಿತು. ಶಿಲ್ಪಿ ಬೆದ್ರಡ್ಕ ರಮೇಶ ಕಾರಂತ ಅವರು ನೇತೃತ್ವ ವಹಿಸಿದ್ದರು.
ಸಾಂಪ್ರದಾಯಿಕ ಚಟುವಟಿಕೆಗಳ ನಂತರ ಶಿಲಾಮಯ ಗರ್ಭಗುಡಿಯ ನಿರ್ಮಾಣ ಹೊಣೆ ಹೊತ್ತಿರುವ ಮುರುಡೇಶ್ವರದ ಅಣ್ಣಪ್ಪ ಜಿ. ನಾಯಕ್ ಅವರಿಗೆ ಹೊಣೆ ಹಸ್ತಾಂತರಿಸಿದರು. ಜೀರ್ಣೋದ್ಧಾರ ಸಮಿತಿಯ ಗೌರವಧ್ಯಕ್ಷ ಡಾ.ಕೆ.ಎನ್.ವೆಂಕಟ್ರಮಣ ಹೊಳ್ಳ ಅವರು ಮುಂದಾಳುತ್ವ ವಹಿಸಿದ್ದರು. ಈ ಸಂಬಂಧ ಸಾಮೂಹಿಕ ಪ್ರಾರ್ಥನೆ ನಡೆಯಿತು. ಅಧ್ಯಕ್ಷ ಮೋಹನ್ ರಾಜ್ ಕಾಳ್ಯಂಗಾಡು, ಪ್ರಧಾನ ಕಾರ್ಯದರ್ಶಿ ಹರೀಶ್ ಕೊಳ್ಕೆಬೈಲು, ಕೋಶಾಧಿಕಾರಿ ಶಾಂತಕುಮಾರ್ ಮುಂಡಿತ್ತಡ್ಕ, ಆಡಳಿತೆ ಮೊಕ್ತೇಸರ ಅಚ್ಯುತ ಕೆ., ಧರ್ಮದರ್ಶಿ ನಾರಾಯಣ ಪೂಜಾರಿ, ರಘು ಮೀಪುಗುರಿ, ಲವ ಮೀಪುಗುರಿ, ರಂಜಿತ್ ಮನ್ನಿಪ್ಪಾಡಿ, ದುಗ್ಗಪ್ಪ ಕಾಳ್ಯಂಗಾಡು, ಆನಂದ ಮೀಪುಗುರಿ, ದಯಾನಂದ ಕಾಳ್ಯಂಗಾಡು, ಮಾತೃಸಮಿತಿ ಪದಾಧಿಕಾರಿಗಳು ಮೊದಲಾದವರು ಇದ್ದರು.
ಶೀಘ್ರ ಪೂರ್ಣಶಿಲಾಮಯ ಗರ್ಭಗುಡಿಯ ನಿರ್ಮಾಣ ನಿರೀಕ್ಷೆಯಿದ್ದು, ಒಂದು ಕೋಟಿ ರೂ.ಗೂ ಅಧಿಕ ವೆಚ್ಚ ಅಂದಾಜಿಸಲಾಗಿದೆ. ಈಗ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದ್ದು, ಭಗವದ್ಭಕ್ತರ ಸಂಪೂರ್ಣ ಸಹಕಾರ ಕೋರಲಾಗಿದೆ ಎಂದು ಪದಾಧಿಕಾರಿಗಳು ವಿನಂತಿಸಿದರು.


