ಕಾಸರಗೋಡು: ಶೈಕ್ಷಣಿಕ ಕಂದಾಯ ಜಿಲ್ಲಾ ಶಿಕ್ಷಣಾಧಿಕಾರಿಯಾಗಿ ಸವಿತಾ ಪಿ. ಅವರನ್ನು ನೇಮಕ ಮಾಡಲಾಗಿದೆ. ಕುಂಬಳೆ ಸರ್ಕಾರಿ ಹೈಯರ್ ಸೆಕೆಂಡರಿ ಶಾಲಾ ಶಿಕ್ಷಕಿ, ಶಿರಿಯ ಹಾಗೂ ಕಾಸರಗೋಡು ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ಮುಖ್ಯಶಿಕ್ಷಕಿಯಾಗಿ ಸೇವೆ ಸಲ್ಲಿಸಿರುವ ಇವರು ಡಿಇಓ ಆಗಿ ಬಡ್ತಿ ಹೊಂದಿದ್ದಾರೆ. ಕಾಸರಗೋಡು ಬಿಇಎಂ ಪ್ರೌಢಶಾಲಾ ಹಳೇ ವಿದ್ಯಾರ್ಥಿಯಾಘಿರುವ ಇವರು, ಜಿಲ್ಲಾ ನಿವೃತ್ತ ನ್ಯಾಯಾಧೀಶ ರಾಜ್‍ಕುಮಾರ್ ಮಧೂರು ಅವರ ಪತ್ನಿ. ದೀರ್ಘ ಕಾಲದ ನಂತರ ಕಾಸರಗೋಡು ಶೈಕ್ಷಣಿಕ ಕಂದಾಯ ಜಿಲ್ಲೆಗೆ ಡಿಇಓ ಆಗಿ ಮಹಿಳೆಯೊಬ್ಬರು ನೇಮಕಗೊಂಡಿದ್ದಾರೆ.


