ಕಾಸರಗೋಡು: ಎಸ್ಸೆಸೆಲ್ಸಿ ಮತ್ತು ಪ್ಲಸ್‍ಟು ತರಗತಿಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ಕೇರಳ ರಾಜ್ಯದ ಮೊಗೇರ ಸಮಾಜದ ವಿದ್ಯಾರ್ಥಿಗಳಿಗೆ ಅಭಿನಂದನಾ ಸಮಾರಂಭ ಜುಲೈ 20ರಂದು ಬೆಳಗ್ಗೆ 10ಕ್ಕೆ ವಿದ್ಯಾನಗರದಲ್ಲಿರುವ ಅಸಾಪ್ ಸಭಾಂಗಣದಲ್ಲಿ ಜರುಗಲಿದೆ. ಮೊಗೇರ ಸರ್ವಿಸ್ ಸೊಸೈಟಿಯ ಸಮಾರಂಭದಲ್ಲಿ ಅಭಿನಂದನೆ ಆಯೋಜಿಸಲಾಗಿದೆ.
ಅರ್ಹ ವಿದ್ಯಾರ್ಥಿಗಳು ತಮ್ಮ ಬಯೋಡೇಟಾ ಮತ್ತು ಮಾಕ್ರ್ಸ್ ಕಾರ್ಡ್‍ಗಳ ಪ್ರತಿಯನ್ನು ಜುಲೈ 10ಕ್ಕೆ ಮುಂಚಿತವಾಗಿ ಐ. ಲಕ್ಷ್ಮಣ ಪೆರಿಯಡ್ಕ, ಶ್ರೀದೇವಿಕೃಪಾ ಪೆರಿಯಡ್ಕ, ಅಂಚೆ ಶಿರಿಬಾಗಿಲು-671124, ಕಾಸರಗೋಡು ವಿಳಾಸಕ್ಕೆ ಕಳುಹಿಸಿಕೊಡುವಂತೆ ಪ್ರಕಟಣೆ ತಿಳಿಸಿದೆ. ಮೊಬೈಲ್(9562393482)

