ಕುಂಬಳೆ: ಪೊಲೀಸರನ್ನು ಅವಮಾನಿಸುವ ರೀತಿಯಲ್ಲಿ ರೀಲ್ಸ್ ತಯಾರಿಸಿದ ಒಂಬತ್ತು ಮಂದಿಯನ್ನು ಕುಂಬಳೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕುಂಬಳೆ ಬದ್ರಿಯಾ ನಗರ ನಿವಾಸಿಗಳಾದ ಅಬೂಬಕ್ಕರ್ ಸಿದ್ದಿಕ್, ಅಬ್ದುಲ್ ರಾವುಫ್, ಮಹಮ್ಮದ್ ರಿಯಾಸ್, ಶುಹೈಬ್, ಮಹಮ್ಮದ್ ಮುಸಾಮಿಲ್, ಮಹಮ್ಮದ್ ಫಾಯಿಸ್, ಮೊಯ್ದೀನ್‍ಕುಞÂ, ಮಹಮ್ಮದ್ ಮಶೂಕ್ ಹಾಗೂ ಮೊಯ್ದೀನ್ ಜುನೈದ್ ಬಂಧಿತರು.
ಪೊಲೀಸರ ವಿರುದ್ಧ ಕೀಳು ಅಭಿರುಚಿ ಬರುವಂತೆ ಚಿತ್ರೀಕರಿಸಿ ರೀಲ್ಸ್ ತಯಾರಿಸಿರುವ ಬಗ್ಗೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು. ಮಹಮ್ಮದ್ ಮಶೂಕ್‍ನ ಮೊಬೈಲಲ್ಲಿ ಈ ರೀತಿ ರೀಲ್ಸ್ ತಯಾರಿಸಲಾಗಿದ್ದು, ಈತನ ಮೊಬೈಲ್ ಪೊಲೀಸರು ವಶಪಡಿಸಿಕೊಂಡಿದ್ದಾರೆ.


