ಕುಂಬಳೆ: ಮದ್ಯದಮಲಿನಲ್ಲಿ ಪರಸ್ಪರ ಹೊಡೆದಾಡಿಕೊಂಡಿದ್ದ ಯುವಕರಿಬ್ಬರನ್ನು ಚದುರಿಸಲು ಆಗಮಿಸಿದ ಪೊಲೀಸರ ಮೇಲೆ ಇಬ್ಬರೂ ಜತೆಯಾಗಿ ಆಕ್ರಮಿಸಲು ಮುಂದಾದ ಘಟನೆ ಸೀತಾಂಗೋಳಿಯಲ್ಲಿ ನಡೆದಿದೆ.
ಕುಂಬಳೆ ಪೊಲೀಸ್ ಠಾಣೆ ವ್ಯಾಪ್ತಿಯ ಸೀತಾಂಗೋಳಿ ಸನಿಹದ ಸೂರಂಬೈಲ್ ನಿವಾಸಿ ಹೃತಿಕ್(25) ಹಾಗೂ ಬೇಳ ಪೆರಿಯಡ್ಕ ನಿವಾಸಿ ಹರೀಶ್ ಪಾಟಾಳಿ(43)ಎಂಬವರಿ ಮದ್ಯದ ನಶೆಯಲ್ಲಿ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಇವರೊಳಗೆ ಹೊಡೆದಾಟ ತೀವ್ರಗೊಳ್ಳುತ್ತಿದ್ದಂತೆ ಸ್ಥಳೀಯರು ನೀಡಿದ ಮಾಹಿತಿಯನ್ವಯ ಪೊಲೀಸರು ಸ್ಥಳಕ್ಕಾಗಮಿಸಿ ಇವರನ್ನು ಚದುರಿಸಲು ಯತ್ನಿಸುತ್ತಿದ್ದಂತೆ, ಹೊಡೆದಾಡಿಕೊಂಡಿದ್ದ ಇಬ್ಬರೂ ಒಟ್ಟಾಗಿ ಪೊಲೀಸರ ಮೇಲೆಯೇ ತಿರುಗಿ ಬಿದ್ದಿದ್ದಾರೆ!
ಈ ಬಗ್ಗೆ ಮಾಹಿತಿ ಪಡೆದ ಕುಂಬಳೆ ಠಾಣೆ ಎಸ್.ಐ ಶ್ರೀಜೇಶ್ ನೇತೃತ್ವದ ಪೊಲೀಸರ ತಂಡ ಸ್ಥಳಕ್ಕಾಗಮಿಸಿ ಇಬ್ಬರನ್ನೂ ಬಂಧಿಸಿದ್ದಾರೆ. ಠಾಣೆ ಸಿಪಿಓ ಮಹಮ್ಮದ್ ಫಹಾದ್ ನೀಡಿದ ದೂರಿನನ್ವಯ ಇವರ ವಿರುದ್ಧ ಕೇಸು ದಾಖಲಿಸಲಾಗಿದ್ದು, ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

