ಉಪ್ಪಳ: ಈ ವರ್ಷದ ನವೆಂಬರ ತಿಂಗಳು ನಡೆಯಲಿರುವ ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಅಭೂತಪೂರ್ವ ಗೆಲುವು ಸಾಧಿಸಲಿದೆ ಎಂದು ಮಂಜೇಶ್ವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುಹಮ್ಮದ್ ಡಿ.ಎಂ.ಕೆ. ಆಶಾಭಾವನೆ ವ್ಯಕ್ತಪಡಿಸಿದ್ದಾರೆ. ಹತ್ತು ವರ್ಷಗಳ ಎಡರಂಗ ಸರ್ಕಾರದ ದುರಾಡಳಿತ ಅಂತ್ಯಗೊಳಿಸುವ ಅವಕಾಶಕ್ಕೆ ಜನರು ಕಾಯುತ್ತಿದ್ದಾರೆ. ಜನತೆಯ ಆಕ್ರೋಶ ಈ ಚುನಾವಣೆಯಲ್ಲಿ ಪ್ರತಿಬಿಂಬಿತವಾಗಲಿದೆ ಎಂದೂ ಅವರು ಹೇಳಿದರು.
ಮಂಗಲ್ಪಾಡಿ ಮಂಡಲದ ಹನ್ನೊಂದನೇ ಹೇರೂರ್ ವಾರ್ಡ್ ಕಾಂಗ್ರೆಸ್ ಸಮಿತಿ ರೂಪೀಕರಣ ಹಾಗೂ ಮಹಾತ್ಮಾ ಗಾಂಧಿ ಕುಟುಂಬ ಸಂಗಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಬಶೀರ್ ಬೆಂಕಿಮೂಲೆ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ನೇತಾರರಾದ ಬಾಬು ಬಂದ್ಯೋಡು, ಫಾರೂಕ್ ಶಿರಿಯ, ಮುಹಮ್ಮದ್ ಸೀದಂಗಡಿ, ರಾಜೇಶ್ ನಾಯ್ಕ್ ಮುಂತಾದವರು ಉಪಸ್ಥಿತರಿದ್ದರು.
ಹೇರೂರ್ ವಾರ್ಡ್ ಸಮಿತಿಯನ್ನು ರೂಪೀಕರಿಸಲಾಯಿತು. ಬಶೀರ್ ಬೆಂಕಿಮೂಲೆ (ಅಧ್ಯಕ್ಷ), ಅಶ್ರಫ್ ಪಾಂಡಿವಯಲ್, ಸಜೀವ ಕುಮಾರ್ (ಉಪಾಧ್ಯಕ್ಷರು), ನಾಗರಾಜ್(ಪ್ರಧಾನ ಕಾರ್ಯದರ್ಶಿ), ಉಸ್ಮಾನ್, ರಾಬರ್ಟ್ (ಜೊತೆ ಕಾರ್ಯದರ್ಶಿಗಳು), ಕೃಷ್ಣನ್ (ಕೋಶಾಧಿಕಾರಿ) ಖಾದರ್, ಮಮ್ಮುಂಞÂ, ಯೂಸುಫ್ ಪಡ್ಲಡ್ಕ, ಮೊಯ್ದಿನ್, ಲೀನಾ, ಸುಜಾತಾ (ಕಾರ್ಯಕಾರಿ ಸಮಿತಿ ಸದಸ್ಯರು) ಆಯ್ಕೆ ಮಾಡಲಾಯಿತು.

.jpg)
