ಮೆಸೇಜಿಂಗ್ ಜಗತ್ತಿನ ಅನಭಿಷಿಕ್ತ ದೊರೆಯಂತಿರುವ ವಾಟ್ಸಾಪ್‌ಗೆ ಪ್ರತಿಸ್ಪರ್ಧಿಯಾಗಿ, ಟ್ವೀಟರ್‌ನ ಸಹಸಂಸ್ಥಾಪಕ ಜಾಕ್ ಡೋರ್ಸಿ 'ಬಿಟ್‌ಚ್ಯಾಟ್' ಎಂಬ ಹೊಸ ಆಯಪ್ ಅಭಿವೃದ್ಧಿಪಡಿಸಿದ್ದಾರೆ.
ಬ್ಲಾಕ್‌ನ ಸಿಇಒ ಕೂಡ ಆಗಿರುವ ಜಾಕ್ ಅವರ ಈ ಆಯಪ್ ಇಂಟರ್‌ನೆಟ್ ಸಂಪರ್ಕ, ವೈಫೈ, ಸರ್ವರ್, ದೂರವಾಣಿ ಸಂಖ್ಯೆ, ಇಮೇಲ್ ಇಲ್ಲದೆ, ಕೇವಲ ಬ್ಲ್ಯೂಟೂಥ್ ಬಳಸಿ ಕೆಲಸ ಮಾಡುತ್ತದೆ.
ಇದು ಸದ್ಯ ಪರೀಕ್ಷಾ ಹಂತದಲ್ಲಿದೆ.
ಸಾಮಾನ್ಯವಾಗಿ ಬ್ಲ್ಯೂಟೂಥ ಬಳಸಿಕೊಂಡು ಸಮೀಪದಲ್ಲಿರುವ ಉಪಕರಣಗಳನ್ನು ಮಾತ್ರ ಸಂಪರ್ಕಿಸಲು ಸಾಧ್ಯ. ಆದರೆ ಈ ಆಯಪ್‌ನಲ್ಲಿ ಸಂದೇಶ ರವಾನಿಸುವ ಮತ್ತು ಪಡೆಯುವ ಮೊಬೈಲ್‌ಗಳು ದೂರದಲ್ಲಿದ್ದರೂ, ಸಂವಹನಕ್ಕೆ ಯಾವುದೇ ತೊಡಕಾಗದು ಎನ್ನಲಾಗಿದೆ.
ಈ ಆಯಪ್‌ನಿಂದ ಇಂಟರ್‌ನೆಟ್ ಇಲ್ಲದ ಸಂದರ್ಭಗಳಲ್ಲಿ ಅಥವಾ ಪ್ರದೇಶಗಳಲ್ಲಿ ಸಂಪರ್ಕ ಸಾಧಿಸಲು ಬಳಸಬಹುದಾಗಿದೆ. ಮುಂದಿನ ದಿನಗಳಲ್ಲಿ ವೈಫೈ ಸಂಪರ್ಕದೊಂದಿಗೆ ಸಂದೇಶ ರವಾನೆಗೆ ವೇಗ ಕೊಡುವ ನಿಟ್ಟಿನಲ್ಲೂ ಕೆಲಸ ನಡೆಯುತ್ತಿದೆ.
ವಾಟ್ಸಾಪ್ ಚಾಟ್‌ಗಲ್ಲಿ ಭಾರೀ ಬದಲಾವಣೆ
ವಾಟ್ಸಾಪ್‌ನ ಇತ್ತೀಚಿನ iOS ಬೀಟಾ ಆವೃತ್ತಿ 25.19.10.80, ಟೀಮ್ "ಥ್ರೆಡ್ಡೆಡ್ ಮೆಸೇಜ್ ರಿಪ್ಲೈಸ್" ಎಂಬ ಹೊಸ ವೈಶಿಷ್ಟ್ಯವನ್ನು ಪರಿಚಯಿಸುವಲ್ಲಿ ಕೆಲಸ ಮಾಡುತ್ತಿದೆ ಎನ್ನುವುದು ಗೊತ್ತಾಗಿದೆ. ಹೆಸರೇ ಸೂಚಿಸುವಂತೆ, ಇದು ಮೂಲ ಸಂದೇಶದ ಅಡಿಯಲ್ಲಿ ರಿಪ್ಲೈಗಳನ್ನು ಗ್ರೂಪ್ ಮಾಡುತ್ತದೆ, ಆ ಮೂಲಕ ಬ್ಯುಸಿ ಚಾಟ್‌ನಲ್ಲಿ ಸಂದೇಶಗಳನ್ನು ಓದುವುದನ್ನು ಇನ್ನಷ್ಟು ಸುಲಭವಾಗಿಸಲಿದೆ. ಇದಿನ್ನೂ ಅಭಿವೃದ್ಧಿ ಹಂತದಲ್ಲಿದ್ದು, ಯೂಸರ್‌ಗಳು ಸಂಭಾಷಣೆ ಮಾಡುವ ಕೆಲಸದಲ್ಲಿ ದೊಡ್ಡ ಬದಲಾವಣೆಗೆ ಒಳಗಾಗಲಿದ್ದಾರೆ ಎನ್ನುವುದನ್ನು ಸೂಚಿಸಿದೆ.
ಈ ವೈಶಿಷ್ಟ್ಯದೊಂದಿಗೆ, WhatsApp ಚಾಟ್ ಅನುಭವವನ್ನು ಸಂಪೂರ್ಣವಾಗಿ ಅಪ್‌ಡೇಟ್ ಮಾಡಲು ಮತ್ತು ಅದನ್ನು ಹೆಚ್ಚು ರಚನಾತ್ಮಕವಾಗಿಸಲು ನೋಡುತ್ತಿದೆ.
ವಾಟ್ಸಾಪ್ ಥ್ರೆಡ್ಡೆಡ್ ಮೆಸೇಜ್ ರಿಪ್ಲೈ: ಏನಿದರ ವಿಶೇಷತೆ
ಮುಂಬರುವ WhatsApp ಥ್ರೆಡ್ಡೆಡ್ ಮೆಸೇಜ್ ರಿಪ್ಲೈ ಗ್ರೂಪ್ ಚಾಟ್‌ಗಳುಗೆ ಸ್ಪಷ್ಟ ರಚನೆಯನ್ನು ನೀಡುವ ಮತ್ತು ಯೂಸರ್ ಸಂಭಾಷಣೆಯ ಸಂದರ್ಭವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಸಹಾಯ ಮಾಡುವ ಗುರಿಯನ್ನು ಹೊಂದಿವೆ. WABetaInfo ವರದಿ ಮಾಡಿರುವ ಪ್ರಕಾರ, ಈ ವೈಶಿಷ್ಟ್ಯವು ಪ್ರಗತಿಯಲ್ಲಿದೆ ಮತ್ತು ಶೀಘ್ರದಲ್ಲೇ ಜಾಗತಿಕವಾಗಿ ಬಳಕೆದಾರರಿಗೆ ಲಭ್ಯವಾಗುವ ನಿರೀಕ್ಷೆಯಿದೆ. ಹೊಸ ವೈಶಿಷ್ಟ್ಯ ಬಂದ ನಂತರ, ಚಾಟ್‌ಗಳಲ್ಲಿನ ಸಂದೇಶ ಬಬಲ್‌ಗಳು ಅದಕ್ಕೆ ಎಷ್ಟು ಪ್ರತ್ಯುತ್ತರಗಳನ್ನು ಲಗತ್ತಿಸಲಾಗಿದೆ ಎಂಬುದನ್ನು ಸೂಚಿಸುವ ಸಣ್ಣ ಬ್ಯಾಡ್ಜ್ ಅನ್ನು ತೋರಿಸುತ್ತವೆ.
ಬ್ಯಾಡ್ಜ್ ಅನ್ನು ಟ್ಯಾಪ್ ಮಾಡುವುದರಿಂದ ಆ ಸಂದೇಶಕ್ಕೆ ಎಲ್ಲಾ ರಿಪ್ಲೈಗಳನ್ನು ಒಂದೇ ಸ್ಥಳದಲ್ಲಿ ಪ್ರದರ್ಶಿಸುವ ಹೊಸ ಪರದೆಯು ತೆರೆಯುತ್ತದೆ. ಬಳಕೆದಾರರು ಥ್ರೆಡ್‌ನೊಳಗಿಂದಲೇ ಓದಲು ಮತ್ತು ಉತ್ತರಿಸಲು ಸಾಧ್ಯವಾಗುತ್ತದೆ.
ರಿಫ್ಲೈ ಥ್ರೆಡ್‌ಗಳು ಸಂಬಂಧಿತ ಚರ್ಚೆಗಳನ್ನು ಒಟ್ಟುಗೂಡಿಸುವ ಮೂಲಕ ಗ್ರೂಪ್ ಚಾಟ್‌ಗಳನ್ನು ತೆರವುಗೊಳಿಸಲು ಸಹಾಯ ಮಾಡುತ್ತದೆ, ಯಾರು ಯಾವುದಕ್ಕೆ ಪ್ರತ್ಯುತ್ತರಿಸಿದ್ದಾರೆ ಎಂಬುದನ್ನು ಅನುಸರಿಸಲು ಸುಲಭವಾಗುತ್ತದೆ ಎಂದು ವರದಿ ಹೇಳುತ್ತದೆ.




