ಇಂಫಾಲ್: ಮಣಿಪುರದ ಕಣಿವೆ ಜಿಲ್ಲೆ ಇಂಫಾಲ್‌ನಲ್ಲಿ ನಿಷೇಧಿತ ಸಂಘಟನೆಗಳಿಗೆ ಸೇರಿದ ಮೂವರು ಬಂಡುಕೋರರನ್ನು ಭದ್ರತಾ ಪಡೆಗಳು ಬಂಧಿಸಿವೆ.
ಬಿಷ್ಣುಪುರ ಜಿಲ್ಲೆಯ ಪಿಡಬ್ಲ್ಯುಜಿ ಸಂಘಟನೆಗೆ ಸೇರಿದ ಓಯಿನಮ್ ಹಿಮನ್‌ಜಿತ್ ಸಿಂಗ್, ಕಂಗ್ಲೀಪಾಕ್ ಕಮ್ಯುನಿಸ್ಟ್ ಪಾರ್ಟಿಯ ಟೊಂಬಾ ಸಿಂಗ್, ಲಾರೆಂಬಮ್ ಸುರೇಶ್ ಎಂಬುವರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪೂರ್ವ ಇಂಫಾಲ್‌ನ ಬಾರುನಿ ಬೆಟ್ಟ ಪ್ರದೇಶದಲ್ಲಿ ಬಂಧಿತರಿಂದ 303 ರೈಫಲ್, ಎರಡು ಪಿಸ್ತೂಲು, ಸಿಂಗಲ್ ಬ್ಯಾರಲ್ ಗನ್, ನಾಲ್ಕು ಕಚ್ಚಾಬಾಂಬ್, ವೈರ್‌ಲೆಸ್, ಎರಡು ಸಿಡಿತಲೆ ಸೇರಿ ಶಸ್ತ್ರಾಸ್ತ್ರ ಮತ್ತು ಸ್ಫೋಟಕಗಳನ್ನು ಬುಧವಾರ ವಶಪಡಿಸಿಕೊಳ್ಳಲಾಗಿದೆ ಎಂದು ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ.




