HEALTH TIPS

ಕಾರ್ಯಾವಧಿ ಮುಗಿಯೋ ಮುನ್ನವೇ ಉಪ ರಾಷ್ಟ್ರಪತಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ನಾಯಕರು ಇವರೇ ನೋಡಿ!

ನವದೆಹಲಿ: 74 ವರ್ಷದ ಜಗದೀಪ್ ಧನ್‌ಕರ್ (Jagdeep Dhankhar) ಅವರು ಸೋಮವಾರ ಭಾರತದ ಉಪರಾಷ್ಟ್ರಪತಿ (Vice President) ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ (Resigned). ರಾಷ್ಟ್ರಪತಿಗಳಿಗೆ (President of India ) ಕಳುಹಿಸಿದ ಅಧಿಕೃತ ಪತ್ರದಲ್ಲಿ ಆರೋಗ್ಯ ಕಾರಣಗಳನ್ನು ರಾಜೀನಾಮೆಗೆ ಕಾರಣವಾಗಿ ಉಲ್ಲೇಖಿಸಿದ್ದಾರೆ.

2022ರಿಂದ ಉಪರಾಷ್ಟ್ರಪತಿಯಾಗಿ ಸೇವೆ ಸಲ್ಲಿಸುತ್ತಿದ್ದ ಧನ್‌ಕರ್‌ನ ಅವಧಿ 2027ರವರೆಗೆ ಇತ್ತು. ಸಂವಿಧಾನದ 67(ಎ) ಲೇಖನದಂತೆ ರಾಜೀನಾಮೆ ತಕ್ಷಣದಿಂದ ಜಾರಿಗೆ ಬಂದಿದೆ.

ರಾಜ್ಯಸಭೆಯ ಕಲಾಪ ಆರಂಭವಾದ ದಿನವೇ ರಾಜೀನಾಮೆ ನೀಡಿದ್ದು ಆಘಾತಕಾರಿಯಾಗಿದೆ. ಆದರೆ, ಇದು ಉಪರಾಷ್ಟ್ರಪತಿಯಾಗಿ ಅವಧಿಯ ಮಧ್ಯದಲ್ಲಿ ರಾಜೀನಾಮೆ ನೀಡಿದ ಮೊದಲ ಘಟನೆಯಲ್ಲ. ಇದಕ್ಕೂ ಮುನ್ನ ವಿವಿ ಗಿರಿ (1967-1969) ಮತ್ತು ಆರ್. ವೆಂಕಟರಾಮನ್ (1984-1987) ಕೂಡ ತಮ್ಮ ಅವಧಿ ಪೂರ್ಣಗೊಳಿಸದೆ ರಾಜೀನಾಮೆ ನೀಡಿದ್ದರು.

ವಿವಿ ಗಿರಿ: ವರಾಹಗಿರಿ ವೆಂಕಟ ಗಿರಿ, 1967-1969ರವರೆಗೆ ಉಪರಾಷ್ಟ್ರಪತಿಯಾಗಿದ್ದು, 1969-1974ರವರೆಗೆ ಭಾರತದ ನಾಲ್ಕನೇ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದರು. ಸ್ವಾತಂತ್ರ್ಯ ಬಳಿಕ ಕಾರ್ಮಿಕ ಸಚಿವರಾಗಿ ಸೇವೆ ಸಲ್ಲಿಸಿದ ವಿವಿ ಗಿರಿ ಅವರು 1980ರ ಜೂನ್ 24ರಂದು ನಿಧನರಾದರು.

ಆರ್. ವೆಂಕಟರಾಮನ್: ರಾಮಸ್ವಾಮಿ ವೆಂಕಟರಾಮನ್, 1984-1987ರವರೆಗೆ ಉಪರಾಷ್ಟ್ರಪತಿಯಾಗಿದ್ದು, 1987-1992ರವರೆಗೆ ಭಾರತದ ಎಂಟನೇ ರಾಷ್ಟ್ರಪತಿಯಾದರು. ಲೋಕಸಭೆಗೆ ನಾಲ್ಕು ಬಾರಿ ಚುನಾಯಿತರಾದ ಇವರು, ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಸಂಪುಟದಲ್ಲಿ ರಕ್ಷಣಾ ಮತ್ತು ಹಣಕಾಸು ಸಚಿವರಾಗಿ ಸೇವೆ ಸಲ್ಲಿಸಿದ್ದರು. 2009ರ ಜನವರಿ 27ರಂದು ಇವರು ನಿಧನರಾದರು.

ಧನ್‌ಕರ್ ತಮ್ಮ ರಾಜೀನಾಮೆ ಪತ್ರದಲ್ಲಿ ರಾಷ್ಟ್ರಪತಿ, ಪ್ರಧಾನಮಂತ್ರಿ ಮತ್ತು ಸಂಸದರಿಗೆ ತಮ್ಮ ಅವಧಿಯಲ್ಲಿ ಬೆಂಬಲ ನೀಡಿದಕ್ಕಾಗಿ ಕೃತಜ್ಞತೆ ಸಲ್ಲಿಸಿದ್ದಾರೆ. "ವೈದ್ಯರ ಸಲಹೆಯಂತೆ ಆರೋಗ್ಯಕ್ಕೆ ಆದ್ಯತೆ ನೀಡಲು, ಸಂವಿಧಾನದ 67(ಎ) ಲೇಖನದಂತೆ ತಕ್ಷಣದಿಂದ ಉಪರಾಷ್ಟ್ರಪತಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ," ಎಂದು ರಾಷ್ಟ್ರಪತಿಗಳಿಗೆ ಬರೆದಿದ್ದಾರೆ. ಈ ರಾಜೀನಾಮೆಯು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ರಾಜ್ಯಸಭೆಯ ತಾತ್ಕಾಲಿಕ ಅಧ್ಯಕ್ಷರಾಗಿ ಹರಿವಂಶ್ ನಾರಾಯಣ ಸಿಂಗ್ ಕಾರ್ಯನಿರ್ವಹಿಸಲಿದ್ದು, 60 ದಿನಗಳ ಒಳಗೆ ಮುಂದಿನ ಉಪರಾಷ್ಟ್ರಪತಿ ಚುನಾವಣೆ ನಡೆಯಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries