HEALTH TIPS

ಐಎಂಎಫ್‌ ತೊರೆದ ಭಾರತ ಮೂಲದ ಗೀತಾ ಗೋಪಿನಾಥ್‌

ನ್ಯೂಯಾರ್ಕ್‌: ಅಂತರರಾಷ್ಟ್ರೀಯ ಹಣಕಾಸು ನಿಧಿಯ (ಐಎಂಎಫ್) ಮೊದಲ ಉಪ ವ್ಯವಸ್ಥಾಪಕ ನಿರ್ದೇಶಕರಾಗಿರುವ ಭಾರತೀಯ ಅಮೆರಿಕನ್‌ ಗೀತಾ ಗೋಪಿನಾಥ್‌ ಅವರು ಈ ಹುದ್ದೆ ತ್ಯಜಿಸಿದ್ದು, ಪುನಃ ಹಾರ್ವರ್ಡ್‌ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರದ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುವುದಾಗಿ ಹೇಳಿದ್ದಾರೆ.

'ಐಎಂಎಫ್‌ನಲ್ಲಿ ಅದ್ಭುತವಾದ ಏಳು ವರ್ಷಗಳನ್ನು ಕಳೆದಿದ್ದೇನೆ. ಇದೀಗ ನನ್ನ ಶೈಕ್ಷಣಿಕ ವೃತ್ತಿಗೆ ಮರಳಲು ನಿರ್ಧರಿಸಿದ್ದೇನೆ' ಎಂದು ಅವರು ಗೀತಾ ಗೋಪಿನಾಥನ್‌ ಅವರು 'ಎಕ್ಸ್‌'ನಲ್ಲಿ ತಿಳಿಸಿದ್ದಾರೆ.

ಐಎಂಎಫ್‌ ಇತಿಹಾಸದಲ್ಲಿ ಮೊದಲ ಮಹಿಳಾ ಮುಖ್ಯ ಅರ್ಥಶಾಸ್ತ್ರಜ್ಞೆಯಾಗಿ ಕಾರ್ಯನಿರ್ವಹಿಸಿರುವ ಅವರು, ಸೆಪ್ಟೆಂಬರ್‌ 1ರಿಂದ ಹಾರ್ವರ್ಡ್‌ ಅರ್ಥಶಾಸ್ತ್ರ ವಿಭಾಗಕ್ಕೆ ಮರಳಲಿದ್ದಾರೆ.

'ಐಎಂಎಫ್‌ನಲ್ಲಿ ಮುಖ್ಯ ಅರ್ಥಶಾಸ್ತ್ರಜ್ಞೆಯಾಗಿ ಮತ್ತು ಮೊದಲ ಉಪ ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದೇನೆ. ಇದು ನನ್ನ ಜೀವಮಾನದಲ್ಲಿ ದೊರೆತ ಅತ್ಯುತ್ತಮ ಅವಕಾಶ. ಅದಕ್ಕಾಗಿ ನಾನು ಐಎಂಎಫ್‌ಗೆ ಕೃತಜ್ಞಳಾಗಿರುತ್ತೇನೆ' ಎಂದು ಅವರು ತಿಳಿಸಿದ್ದಾರೆ.

'ನಾನು ಶೈಕ್ಷಣಿಕ ಕ್ಷೇತ್ರದಲ್ಲಿನ ನನ್ನ ಬೇರುಗಳಿರುವೆಡೆ ಮರಳಲಿದ್ದೇನೆ. ಜಾಗತಿಕ ಸವಾಲುಗಳನ್ನು ಎದುರಿಸಲು ಅಂತರರಾಷ್ಟ್ರೀಯ ಹಣಕಾಸು ಮತ್ತು ಸಮಗ್ರ ಅರ್ಥಶಾಸ್ತ್ರದಲ್ಲಿ ಸಂಶೋಧನೆ ಮುಂದುವರಿಸಲು ಬಯಸಿದ್ದೇನೆ. ಅಲ್ಲದೆ ಮುಂದಿನ ಪೀಳಿಗೆಯ ಅರ್ಥಶಾಸ್ತ್ರಜ್ಞರಿಗೆ ತರಬೇತಿ ನೀಡುವ ಬಯಕೆ ಇದೆ' ಎಂದು ಅವರು ಹೇಳಿದ್ದಾರೆ.

ಗೀತಾ ಅವರು ಐಎಂಎಫ್‌ನ ಮುಖ್ಯ ಅರ್ಥಶಾಸ್ತ್ರಜ್ಞರಾಗಿ 2019ರ ಜನವರಿಯಲ್ಲಿ ನೇಮಕಗೊಂಡರು. 2022ರ ಜನವರಿಯಲ್ಲಿ ಉಪ ವ್ಯವಸ್ಥಾಪಕ ನಿರ್ದೇಶಕರಾಗಿ ಬಡ್ತಿ ಪಡೆದರು. ಅದಕ್ಕೂ ಮುನ್ನ ಅವರು ಹಾರ್ವರ್ಡ್‌ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಮತ್ತು ಶಿಕಾಗೊ ವಿಶ್ವವಿದ್ಯಾಲಯದ 'ಬೂತ್‌ ಸ್ಕೂಲ್‌ ಆಫ್‌ ಬ್ಯುಸಿನೆಸ್‌'ನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries