ಕಾಸರಗೋಡು: ಕೇರಳ ಕೇಂದ್ರೀಯ ವಿಶ್ವವಿದ್ಯಾಲಯ ಕಾಸರಗೋಡು ಪೆರಿಯ ಕ್ಯಾಂಪಸ್‍ನಲ್ಲಿ ಎಂಎ ಕನ್ನಡ ವಿಭಾಗದಲ್ಲಿ ಕೆಲವೊಂದು ಸೀಟುಗಳು ಲಭ್ಯವಿದ್ದು, ಆಸಕ್ತ ಅಭ್ಯರ್ಥಿಗಳು ಜುಲೈ 3 ರಂದು ಬೆಳಗ್ಗೆ 9.30ಕ್ಕೆ ಪೆರಿಯ ಕ್ಯಾಂಪಸ್‍ನಲ್ಲಿರುವ ಕನ್ನಡ ವಿಭಾಗದಲ್ಲಿ ನಡೆಯಲಿರುವ ಸ್ಪಾಟ್ ಅಡ್ಮಿಶನ್‍ನಲ್ಲಿ ಹಾಜರಾಗಬಹುದಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ, ಮೊಬೈಲ್ ಸಂಖ್ಯೆ(9964022582)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.




