ಕಾಸರಗೋಡು: ಬೇಕಲ ಪೊಲೀಸ್ ಠಾಣೆ ವ್ಯಾಪ್ತಿಯಿಂದ ನಾಪತ್ತೆಯಾಗಿದ್ದ, ಪೊಲೀಸ್ ಇಲಾಖೆ ಉದ್ಯೋಗಿ ಅಜಯ್‍ವಿನ್ಸನ್ ಎಂಬವರ ಪತ್ನಿ ಆನಿಮೋಳ್(35) ತನ್ನ ಪ್ರಿಯತಮ ಹಾಗೂ ಪತಿಯ ಸ್ನೇಹಿತ ಪೆರಿಯಾಟಡ್ಕ ನಿವಾಸಿ ರಾಜು ಎಂಬಾತನ ಜತೆ ವಳಪಟ್ಟಣಂನ ಹೊಳಗೆ ಹಾರಿದ್ದು, ಆನಿಮೋಳ್ ನೀರಿನಿಂದ ಮೇಲಕ್ಕೇರಿದ್ದರೆ, ನೀರುಪಾಲಾದ ಯುವಕನಿಗಾಗಿ ಹುಡುಕಾಟ ನಡೆಯುತ್ತಿದೆ.
ಆನಿಮೋಳ್ ಭಾನುವಾರ ಬೆಳಗ್ಗೆ ಪೆರಿಯಾಟಡ್ಕದ ಮನೆಯಿಂದ ನಾಪತ್ತೆಯಾಗಿದ್ದು, ಈ ಬಗ್ಗೆ ಬೇಕಲ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು. ಈ ಮಧ್ಯೆ ವಳಪಟ್ಟಣದಲ್ಲಿ ತುಂಬಿ ಹರಿಯುವ ಹೊಳೆಗೆ ಇಬ್ಬರೂ ಹಾರಿದ್ದು, ಆನಿಮೋಳ್ ಹೊಳೆ ಅಂಚಿನ ಕುರುಚಲು ಪೊದೆ ಮೂಲಕ ದಡ ಸೇರಿದ್ದರೆ, ಸ್ನೇಹಿತ ರಾಜು ನಾಪತ್ತೆಯಾಘಿದ್ದಾನೆ. ಹೊಳೆಬದಿಯಲ್ಲಿದ್ದ ಮಹಿಳೆಯ ಬಗ್ಗೆ ಸ್ಥಳೀಯರು ಪೊಲೀಸರಿಗೆ ನೀಡಿದ ಮಾಹಿತಿಯನ್ವಯ ಈಕೆಯನ್ನು ಠಾಣೆಗೆ ಕರೆದೊಯ್ದು ವಿಚಾರಿಸಿದಾಗ ಮಾಹಿತಿ ನೀಡಿದ್ದಳು.




