ತಿರುವನಂತಪುರಂ: ವಯನಾಡ್ ಜಿಲ್ಲೆಯ ಪುಲ್ಪಳ್ಳಿ ಸಮೀಪ ಮುಳ್ಳಂಕೊಲ್ಲಿಯಲ್ಲಿ ಶನಿವಾರ ಆಯೋಜಿಸಿದ್ದ ಅಭಿವೃದ್ಧಿ ಕುರಿತ ವಿಚಾರಸಂಕಿರಣದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎನ್.ಡಿ. ಅಪ್ಪಚ್ಚನ್ ಹಾಗೂ ಅವರ ಬೆಂಬಲಿಗರ ಮೇಲೆ ಕೆಲ ಕಾರ್ಮಿಕರು ದಾಳಿ ಮಾಡಿದ್ದಾರೆ.
'ಕೆಲ ಕಾರ್ಮಿಕರು ಮದ್ಯದ ಅಮಲಿನಲ್ಲಿ ಗಲಾಟೆ ಮಾಡಲು ಆರಂಭಿಸಿದರು. ಇತರೆ ಕಾರ್ಮಿಕರು ಇದನ್ನು ತಡೆಯಲು ಪ್ರಯತ್ನಿಸಿದರು. ಪೊಲೀಸರಿಗೆ ದೂರು ನೀಡಿಲ್ಲ' ಎಂದು ಅಪ್ಪಚ್ಚನ್ ತಿಳಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ವಯನಾಡ್ ಘಟಕದಲ್ಲಿ ಅಪ್ಪಚ್ಚನ್ ಹಾಗೂ ಶಾಸಕ ಐ.ಸಿ. ಬಾಲಕೃಷ್ಣನ್ ಬೆಂಬಲಿಗರ ನಡುವೆ ಇತ್ತೀಚೆಗೆ ವಾಗ್ವಾದ ನಡೆದಿತ್ತು.
ಜಿಲ್ಲಾ ಕಾಂಗ್ರೆಸ್ ಸಮಿತಿಯ ಮಾಜಿ ಖಜಾಂಚಿ ಎನ್.ಎಂ. ವಿಜಯನ್ ಅವರ ಸಾವಿನ ನಂತರ, ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಬಾಲಕೃಷ್ಣನ್ ಅವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದರು.
ವಯನಾಡ್ ಲೋಕಸಭಾ ಕ್ಷೇತ್ರವನ್ನು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಪ್ರತಿನಿಧಿಸುತ್ತಿದ್ದಾರೆ.




