HEALTH TIPS

ಭಾರತದ ಅತಿದೊಡ್ಡ ಸೌರಫಲಕ ಪ್ರೇಮ್ ಉತ್ಪಾದನಾ ಘಟಕ ತೆರೆದ ಎಚ್&ಎಚ್ ಅಲ್ಯೂಮಿನಿಯಂ

ರಾಜಕೋಟ್: ಗುಜರಾತ್ ಮೂಲದ ಎಚ್&ಎಚ್ ಅಲ್ಯೂಮಿನಿಯಂ ಪ್ರೈವೇಟ್ ಲಿಮಿಟೆಡ್ ಗುಜರಾತ್‍ನ ರಾಜ್‍ಕೋಟ್‍ನಲ್ಲಿ ಭಾರತದ ಅತಿದೊಡ್ಡ ಅಲ್ಯೂಮಿನಿಯಂ ಸೌರಫಲಕ ಉತ್ಪಾದನಾ ಘಟಕವನ್ನು ಉದ್ಘಾಟಿಸಿದೆ.

ಕೇಂದ್ರ ಜಲಶಕ್ತಿ ಸಚಿವ ಸಿ.ಆರ್. ಪಾಟೀಲ್ ಈ ಘಟಕವನ್ನು ಉದ್ಘಾಟಿಸಿದ್ದಾರೆ. ರಾಜ್‍ಕೋಟ್‍ನ ಚಿಬ್ಡಾ ಗ್ರಾಮದಲ್ಲಿ ವರ್ಷಕ್ಕೆ 24,000 ಮೆಟ್ರಿಕ್ ಟನ್‍ಗಳ ಸಾಮಥ್ರ್ಯವನ್ನು ಹೊಂದಿರುವ ಈ ಘಟಕವು ಭಾರತದಲ್ಲಿ 6 ಗಿಗಾವ್ಯಾಟ್‍ಗಳವರೆಗೆ ಸೌರಶಕ್ತಿ ಸ್ಥಾಪನೆಯನ್ನು ಒದಗಿಸುತ್ತದೆ.

28,000 ಚದರ ಮೀಟರ್ ವಿಸ್ತೀರ್ಣದ ಅತ್ಯಾಧುನಿಕ ಸೌರಫಲಕ ಅಲ್ಯೂಮಿನಿಯಂ ಫ್ರೇಮ್ ಘಟಕದಲ್ಲಿ ಕಂಪನಿಯು ಸುಮಾರು 150 ಕೋಟಿ ರೂ.ಗಳನ್ನು ಹೂಡಿಕೆ ಮಾಡಿದೆ.

ಕಳೆದ ತಿಂಗಳು ಸ್ಥಾವರದಲ್ಲಿ ಪ್ರಾಯೋಗಿಕ ಉತ್ಪಾದನೆ ಪ್ರಾರಂಭವಾಯಿತು. ಈ ಸ್ಥಾವರವು 300 ಕ್ಕೂ ಹೆಚ್ಚು ಜನರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ.

ಮುಂದಿನ ತಿಂಗಳೊಳಗೆ ವಾಣಿಜ್ಯ ಉತ್ಪಾದನೆಯನ್ನು ಪ್ರಾರಂಭಿಸುವ ನಿರೀಕ್ಷೆಯಿದೆ ಎಂದು ಎಚ್&ಎಚ್ ಅಲ್ಯೂಮಿನಿಯಂ ಪ್ರೈವೇಟ್ ಲಿಮಿಟೆಡ್ ನಿರ್ದೇಶಕರಾದ ಉತ್ತಮ್ ಪಟೇಲ್ ಮತ್ತು ವಿಜಯ್ ಕನೇರಿಯಾ ಹೇಳಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries