ಉಪ್ಪಳ: ಕೊಂಡೆವೂರು ಮಠದ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರ 22ನೇ ವರ್ಷದ ಚಾತುರ್ಮಾಸ್ಯ ವೃತಾಚರಣೆ ಅಂಗವಾಗಿ ಭಾನುವಾರ ಬೆಳಿಗ್ಗೆ ಕಲಾರತ್ನ ಶಂನಾಡಿಗ ಕುಂಬ್ಳೆ ಇವರ ಕೀರ್ತನಾ ಕುಟೀರದ ಶಿಷ್ಯೆವೃಂದದವರಿಂದ ಯುವ ಕೀರ್ತನೋತ್ಸವ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಶ್ರೀಗಳು ದೀಪ ಪ್ರಜ್ವಲಿಸಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಶಂನಾಡಿಗರು ಕೀರ್ತನಾ ಕುಟೀರವನ್ನು ಸ್ಥಾಪಿಸಿ 'ಯುವ ಬಳಗ' ನಮ್ಮ ಸಂಸ್ಕøತಿಯಲ್ಲಿ ಹಾಸುಹೊಕ್ಕಾಗಿರುವ ಹರಿದಾಸ ಪರಂಪರೆಯನ್ನು ಬೆಳೆಸುತ್ತಿರುವುದು ಶ್ಲಾಘನೀಯ ಎಂದು ಅಭಿಪ್ರಾಯಪಟ್ಟರು.
ಕೀರ್ತನಾ ಕುಟೀರದ ವಿದ್ಯಾರ್ಥಿನಿಯರಾದ ಕು.ಅಪರ್ಣ, ಕು.ಧ್ಯೇಯ ವರ್ಕಾಡಿ, ಕು.ಪ್ರಣಮ್ಯ, ಕು.ಐಶ್ವರ್ಯ ಪೈ, ಕು.ಭಾವನಾ ನಾಯಕ್, ಕು.ಲೇಖನ ಐಲ, ಕು.ಶ್ರಾವಣ್ಯ ಕೊಂಡೆವೂರು, ಕು.ಪೂಜಾ ವಾಸುದೇವನ್, ಕು.ಗಾಯತ್ರೀ ಕೊಂಡೆವೂರು, ಕು.ಕೃತಿಕ, ಕು.ವೈಭವಿ ಕುಂಬ್ಳೆ ಇವರು ಪುರಾಣದ ವಿವಿಧ ವಿಷಯಗಳ ಬಗ್ಗೆ ಹರಿಕೀರ್ತನೆ ನಡೆಸಿಕೊಟ್ಟರು. ಶ್ರೀಗಳು ಶಂನಾಡಿಗರನ್ನು ಹಾಗೂ ಅವರ ಶೀಷ್ಯೆಯಂದಿರನ್ನು ಶಾಲುಹೊದಿಸಿ ಅನುಗ್ರಹಪತ್ರ ನೀಡಿ ಸನ್ಮಾನಿಸಿ ವೇದಮಾತೆ ಗಾಯತ್ರೀ ದೇವಿಯ ಹಾಗೂ ಭಗವಾನ್‍ನಿತ್ಯಾನಂದ ಗುರುಗಳ ಆಶೀರ್ವಾದ ಸದಾ ಎಲ್ಲರ ಮೇಲಿರಲಿ ಎಂದು ಹಾರೈಸಿದರು.




.jpeg)
.jpeg)
.jpeg)
