ಮಂಜೇಶ್ವರ: ಮೀಯಪದವು ವಿದ್ಯಾವರ್ಧಕ ಎ.ಯು.ಪಿ. ಶಾಲೆಯಲ್ಲಿ ವಿವಿಧ ಕ್ಲಬ್ ಗಳ ಉದ್ಘಾಟನಾ ಕಾರ್ಯಕ್ರಮ ಶಾಲಾ ಸಭಾಂಗಣದಲ್ಲಿ ಜರಗಿತು. ಹಿರಿಯ ಅಧ್ಯಾಪಕ ರಾಮಚಂದ್ರ ಕೆ.ಯಂ. ಕಾರ್ಯಕ್ರಮವನ್ನು ಔಪಚಾರಿಕವಾಗಿ ಉದ್ಘಾಟಿಸಿದರು. ಅಧ್ಯಾಪಕ ಬಾಲಕೃಷ್ಣ ಎಂ. ವಿದ್ಯಾರ್ಥಿಗಳಿಗೆ ಕ್ಲಬ್ ಗಳ ಬಗ್ಗೆ ಮಾಹಿತಿ ನೀಡಿದರು. ವಿವಿಧ ಕ್ಲಬ್ ನ ಸಂಚಾಲಕರು ಉಪಸ್ಥಿತರಿದ್ದರು. ಬಳಿಕ ವಿವಿಧ ಕ್ಲಬ್ ನ ವತಿಯಿಂದ ಚಟುವಟಿಕೆಗಳು ನಡೆದವು. ಎಲ್.ಪಿ.ಎಸ್.ಆರ್.ಜಿ. ಕನ್ವಿನರ್ ಸುನಿಲ್ ಕುಮಾರ್ ಎಂ. ಸ್ವಾಗತಿಸಿ, ಅಧ್ಯಾಪಕ ರಘುವೀರ್ ರಾವ್ ನಿರೂಪಿಸಿ ವಂದಿಸಿದರು.




.jpg)
