ಕಾಸರಗೋಡು: ಕಾರಿನಲ್ಲಿ ಸಾಗಿಸುತ್ತಿದ್ದ 256.2 ಗ್ರಾಂ ಮಾರಕ ಎಂಡಿಎಂಎ ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿ ಬೇಕಲ ಠಾಣೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಕಣ್ಣೂರು ಕೂತುಪರಂಬ ಅಡಿಯಪ್ಪಾರ ನಿವಾಸಿ ಮಹಮ್ಮದ್ ಅಜ್ಮಲ್, ಪಾಲಕ್ಕಾಡ್ ಮಣ್ಣಾರ್‍ಕಾಡ್ ನಿವಾಸಿಗಳಾದ ಜಂಶಾದ್ ಹಾಗೂ ಫಾಯೀಸ್ ಬಂಧಿತರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ವಿ ವಇಜಯ್‍ಭಾರತ್ ರೆಡ್ಡಿ ನಿರ್ದೇಶ ಪ್ರಕಾರ ಬೇಕಲ ಡಿವೈಎಸ್‍ಪಿ ವಿ.ವಿ ಮನೋಜ್‍ಮೇಲ್ನೋಟದಲ್ಲಿ ಬೇಕಲ ಇನ್ಸ್‍ಪೆಕ್ಟರ್ ಶ್ರೀದಾಸ್ ಎಂ.ವಿ ನೇತೃಥ್ವದ ಪೊಲೀಸರ ತಂಡ ಕಾರ್ಯಾಚರಣೆ ನಡೆಸಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿ ಮುಳಿಯಾರು ಪೊವ್ವಲ್ ನಿವಾಸಿ ಮಹಮ್ಮದ್ ಡ್ಯಾನಿಶ್, ಅಬ್ದುಲ್ ಖಾದರ್ ಹಾಗೂ ಕೋಯಿಕ್ಕೋಡ್ ಕುಡಾರತ್ತಿ ನಿವಾಸಿ ಸಾದಿಕ್‍ಆಲಿ ಎಂಬವರನ್ನು ಬಂಧಿಸಲಾಗಿದ್ದು, ಇವರು ನೀಡಿದ ಮಾಹಿತಿಯನ್ವಯ ಉಳಿದವರ ಬಂಧನ ನಡೆದಿದೆ.
ಇತರ ರಾಜ್ಯಗಳಿಂದ ಕೇರಳಕ್ಕೆ ಭಾರೀ ಪ್ರಮಾಣದಲ್ಲಿ ಮಾರಕ ಎಂಡಿಎಂಎ, ಗಾಂಜಾ, ಮೆಥಾಫೊಟಮಿನ್ ರವಾನೆಯಾಗುತ್ತಿದ್ದು, ರಾಜ್ಯಾದ್ಯಂತ ಪೊಲೀಸರು ಕಟ್ಟೆಚ್ಚರ ವಹಿಸುತ್ತಿದ್ದಾರೆ. ಕಾಸರಗೋಡು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ವಿವಿಜಯಭಾರತ್ ರೆಡ್ಡಿ ನಿರ್ದೇಶ ಪ್ರಕಾರ ನಡೆಸಿರುವ ಸ್ಪೆಶ್ಯಲ್ ಡ್ರೈವ್ ಕಾರ್ಯಾಚರಣೆಯಲ್ಲಿ 1554ವಾಹನಗಳ ತಪಾಸಣೆ ನಡೆಸಲಾಗಿದ್ದು, 115ವಾರಂಟ್ ಜಾರಿಗೊಳಿಸಲಾಗಿದೆ. ವಿವಿಧ ಕಾಯ್ದೆಗಳನ್ವಯ 45ಕೇಸು ದಾಖಲಿಸಲಾಗಿದೆ. ಜಿಲ್ಲೆಯ ವಿವಿಧ ವಸತಿಗೃಹ, ಹೋಟೆಲ್‍ಗಳಲ್ಲಿ ತಪಾಸಣೆ ಚುರುಕುಗೊಳಿಸಲಾಗಿದೆ.




