ಕಾಸರಗೋಡು: ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ ಕಾಸರಗೋಡು ಪೆರಿಯ ಕ್ಯಾಂಪಸ್‍ನ ಎಸ್‍ಸಿ ಮತ್ತು ಎಸ್‍ಟಿ ವಿಭಾಗಗಳಲ್ಲಿ ಎಂ.ಎ. ಭಾಷಾಶಾಸ್ತ್ರ ಮತ್ತು ಭಾಷಾ ತಂತ್ರಜ್ಞಾನ ಕಾರ್ಯಕ್ರಮಕ್ಕೆ ಕೆಲವೊಂದು ಸೀಟುಗಳು ಲಭ್ಯವಿರಲಿದೆ. ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದ್ದು, ಜುಲೈ 25ರಂದು ಬೆಳಿಗ್ಗೆ 10.30ಕ್ಕೆ ಪೆರಿಯಾ ಕ್ಯಾಂಪಸ್‍ನ ಭಾಷಾಶಾಸ್ತ್ರ ವಿಭಾಗದಲ್ಲಿ ನಡೆಯಲಿರುವ ಸ್ಪಾಟ್ ಅಡ್ಮಿಷನ್‍ಗೆ ಹಾಜರಾಗಬೇಕು. ಈ ಬಗ್ಗೆ ಮಾಹಿತಿಗಾಗಿ ದೂರವಾಣಿ ಸಂಖ್ಯೆ(0467230626) ಸಂಪರ್ಕಿಬಹುದು. ಹೆಚ್ಚಿನ ಮಾಹಿತಿಗಾಗಿ, ವಿಶ್ವವಿದ್ಯಾಲಯದ ವೆಬ್‍ಸೈಟ್ www.cukerala.ac.in ಗೆ ಭೇಟಿ ನೀಡುವಂತೆ ಪ್ರಕಟಣೆ ತಿಳಿಸಿದೆ.




