ಕಾಸರಗೋಡು: ಕೇರಳ ರಾಜ್ಯ ಬಿಜೆಪಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಿದ್ದು, ಕಾಸರಗೋಡು ಜಿಲ್ಲೆಯ ಮುಂಚೂಣಿ ನೇತಾರ ವಕೀಲ ಕೆ. ಶ್ರೀಕಾಂತ್ ಅವರಿಗೆ ಮಹತ್ವದ ಜವಾಬ್ದಾರಿ ವಹಿಸಿಕೊಡಲಾಗಿದೆ. ಶ್ರೀಕಾಂತ್ ಅವರನ್ನು ಕಾಸರಗೋಡು, ಕಣ್ಣೂರು, ಕೋಯಿಕ್ಕೋಡ್ ಜಿಲ್ಲೆ ಒಳಗೊಂಡ ಕೋಯಿಕ್ಕೋಡ್ ವಲಯ ಸಮಿತಿ ಅಧ್ಯಕ್ಷರನ್ನಾಗಿ ನೇಮಿಸಿ ರಾಜ್ಯ ಸಮಿತಿ ಅಧ್ಯಕ್ಷ ರಾಜೀವ್ ಚಂದ್ರಶೇಖರ್ ಆದೇಶ ಹೊರಡಿಸಿದ್ದಾರೆ.
ಇನ್ನು ರಾಜ್ಯ ಸಮಿತಿಗೆ ನಾಲ್ಕು ಮಂದಿ ಪ್ರಧಾನ ಕಾರ್ಯದರ್ಶಿಗಳನ್ನಾಗಿ ಬಿಜೆಪಿ ಫಯರ್‍ಬ್ರ್ಯಾಂಡ್ ಎಂದೇ ಖ್ಯಾತಿ ಗಳಿಸಿರುವ ಶೋಭಾ ಸುರೇಂದ್ರನ್, ಎಂ.ಟಿ ರಮೇಶ್, ವಕೀಲ ಎಸ್. ಸುರೇಶ್ ಹಾಗೂ ಅನೂಪ್ ಆಂಟನಿ ಜೋಸೆಫ್ ಅವರನ್ನು ನೇಮಿಸಲಾಗಿದೆ. ಕೇರಳದ ನಿವೃತ್ತ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕಿ(ಎಡಿಜಿಪಿ)ಆರ್.ಶ್ರೀಲೇಖಾ, ಡಾ. ಅಬ್ದುಲ್ ಸಲಾಂ, ವಕೀಲ ಬಿ.ಗೋಪಾಲಕೃಷ್ಣ ಸೇರಿದಂತೆ ಹತ್ತು ಮಂದಿಯನ್ನು ರಾಜ್ಯ ಸಮಿತಿ ಉಪಾಧ್ಯಕ್ಷರು ಹಾಗೂ ಹತ್ತು ಮಂದಿ ಕಾರ್ಯದರ್ಶಿಗಳನ್ನು ನೇಮಿಸಲಾಗಿದೆ.ವಕೀಲ ಇ. ಕೃಷ್ಣದಾಸ್ ಅವರನ್ನು ರಾಜ್ಯ ಸಮಿತಿ ಕೋಶಾಧಿಕಾರಿಯನ್ನಾಗಿ ಆಯ್ಕೆ ಮಾಡಲಾಗಿದೆ. ಜೈರಾಜ್ ಕೈಮಲ್ ಕಚೇರಿ ಕಾರ್ಯದರ್ಶಿ, ಅಭಿಜಿತ್ ಆರ್ ನಾಯರ್ ಸೋಶಿಯಲ್ ಮೀಡಿಯಾ ಸಂಚಾಲಕ, ಸಂದೀಪ್ ಸೋಮನಾಥ್ ಮೀಡಿಯಾ ಕನ್ವೀನರ್, ಟಿ.ಪಿ ಜಯಚಂದ್ರನ್ ಮಾಸ್ಟರ್ ಅವರನ್ನು ರಾಜ್ಯ ಮುಖ್ಯ ವಕ್ತಾರರನ್ನಾಗಿ ನೇಮಿಸಲಾಗಿದೆ.
ವಕೀಲ ಕೆ.ಶ್ರೀಕಾಂತ್ ಅವರು ಈ ಹಿಂದೆ ಕಾಸರರಗೋಡು ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ, ಜಿಲ್ಲಾ ಸಮಿತಿ ಅಧ್ಯಕ್ಷ, ರಆಜ್ಯ ಸಮಿತಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು.





