ಕಾಸರಗೋಡು: ಕೇಂದ್ರ ತಂಬಾಕು ನಿಯಂತ್ರಣ ಕಾಯ್ದೆಯ ಅನುಷ್ಠಾನದ ಅಂಗವಾಗಿ, 'ಆಪರೇಷನ್ ಧೂಮ್' ಹೆಸರಿನಲ್ಲಿ ಜಿಲ್ಲೆಯಲ್ಲಿ ವ್ಯಾಪಕ ತಪಾಸಣೆ ನಡೆಸಲಾಯಿತು. ಪೊಲೀಸ್ ಹಾಗೂ ಆರೋಗ್ಯ ಇಲಾಖೆ ಜಂಟಿ ತಪಾಸಣೆಯಲ್ಲಿ, ನೀಲೇಶ್ವರಂ ಬ್ಲಾಕ್ ಮಟ್ಟದ ಸ್ಕ್ವಾಡ್‍ನ ಸದಸ್ಯರು ಪೆÇಲೀಸರ ನೇತೃತ್ವದಲ್ಲಿ, ರಾಜಾಸ್ ಹೈಯರ್ ಸೆಕೆಂಡರಿ ಶಾಲೆಯ ಬಳಿಯ ಅಂಗಡಿಯಿಂದ ತಂಬಾಕು ಉತ್ಪನ್ನಗಳನ್ನು ವಶಪಡಿಸಿಕೊಂಡು ನಾಶಪಡಿಸಿ, ಅಂಗಡಿ ಮಾಲಿಕಗೆ 13,200 ರೂ. ದಂಡ ವಿಧಿಸಲಾಯಿತು. ಕಾನೂನಿನ ಪ್ರಕಾರ ಅಗತ್ಯವಿರುವ ಎಚ್ಚರಿಕೆಯನ್ನು ಪ್ರದರ್ಶಿಸದ 54 ಅಂಗಡಿ ಮಾಲೀಕರಿಗೆ ದಂಡ ವಿಧಿಸಲಾಯಿತು. ತಂಬಾಕು ನಿಯಂತ್ರಣ ಕಾಯ್ದೆಯ ಪ್ರಕಾರ ಶಾಲಾ ಆವರಣದಿಂದ ನೂರು. ಮೀ. ದೂರದ ವರೆಗೆ ತಂಬಾಕು ಮಾರಾಟ ಮಾಡಬಾರದು ಎಂಬ ನಿಬಂಧನೆ ಮೀರಿದ ಪ್ರಕರಣವನ್ನೂ ಪತ್ತೆಹಚ್ಚಲಾಗಿತ್ತು.
ತಪಾಸಣೆಯಲ್ಲಿ ನೀಲೇಶ್ವರಂ ತಾಲ್ಲೂಕು ಆಸ್ಪತ್ರೆಯ ಆರೋಗ್ಯ ಮೇಲ್ವಿಚಾರಕರಾದ ಮಧು ಮೊಟ್ಟಮ್ಮಾಳ್, ಎನ್. ಎ. ಶಾಜು,ಅಜಿತ್ ಸಿ ಫಿಲಿಪ್, ಪೆÇಲೀಸ್ ಉಪ ನಿರೀಕ್ಷಕ ಎ.ವಿ.ಶ್ರೀಕುಮಾರ್, ಅಬಕಾರಿ ನಿರೀಕ್ಷಕ ವೈಶಾಖ್ ಎನ್, ಆರೋಗ್ಯ ನಿರೀಕ್ಷಕರಾದ ಚಂದ್ರಶೇಖರನ್ ತಂಬಿ, ಕೆ.ಗಿರೀಶ್ ಕುಮಾರ್, ಪಿ.ಕೆ.ಮಧು, ಎಂ.ವಿ.ಅಶೋಕನ್, ಸುನಿಶಾಜಾರ್ಜ್ ಮತ್ತು ಟ್ರೆಸಾ ಅವರೊಂದಿಗೆ ಜೂನಿಯರ್ ಹೆಲ್ತ್ ಇನ್ಸ್‍ಪೆಕ್ಟರ್ ಬಿ. ಶ್ರುತಿ, ಅಬಕಾರಿ ಪ್ರಿವೆಂಟಿವ್ ಅಧಿಕಾರಿಗಳಾದ ಪ್ರಸಾದ್ ಮತ್ತು ಪ್ರಜಿತ್, ನಾಗರಿಕ ಅಬಕಾರಿ ಅಧಿಕಾರಿಗಳಾದ ನಿಜಾಮುದ್ದೀನ್ ಮತ್ತು ಶೈಲೇಶ್,ರಾಜೀವನ್, ನಾಗರಿಕ ಪೆÇಲೀಸ್ ಅಧಿಕಾರಿಗಳಾದ ರಾಜೀವನ್ ಮತ್ತು ಸುರೇಂದ್ರನ್ ತಪಾಸಣೆಯ ನೇತೃತ್ವ ವಹಿಸಿದ್ದರು.





