ಕಾಸರಗೋಡು: ಮುಳಿಯಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೇರಡ್ಕದ ಪಯಸ್ವಿನಿ ಅರಣ್ಯ ಸಂರಕ್ಷಣಾ ಸಮಿತಿಯ ನೇತೃತ್ವದಲ್ಲಿ ಅರನ್ಯ ಪ್ರದೇಶದಲ್ಲಿ ಬೀಜಗಳ ಉಂಡೆ ಎಸೆತ ಕಾರ್ಯಕ್ರಮ ಆಯೋಜಿಸಲಾಯಿತು.
ಕುಸಿಯುತ್ತಿರುವ ಅರಣ್ಯವನ್ನು ಮತ್ತೆ ಹಸಿರುಮಯವಾಗಿಸಲು ಹಾಗೂ ಕಾಡುಗಳಲ್ಲಿ ಮರವಾಗಿ ಬೆಳೆಯಬಲ್ಲಿ ಸಸಿಗಳನ್ನು ಬೆಳೆಸುವ ಯೋಜನೆಯನ್ವಯ ಬೀಜ ಎಸೆಯುವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಬೀಜ ಅಳವಡಿಕೆ ಯೋಜನೆಯೋಜನೆಯ ಅಂಗವಾಗಿ, ಕಾಡಿನ ವಿವಿಧ ಭಾಗಗಳಲ್ಲಿ ಸುಮಾರು ಒಂದು ಸಾವಿರಕ್ಕ ಹೆಚ್ಚು ಬೀಜಗಳನ್ನು ಹರಡಲಾಯಿತು. ಪಯಸ್ವಿನಿ ಅರಣ್ಯ ಸಂರಕ್ಷಣಾ ಸಮಿತಿಯ ಅಧ್ಯಕ್ಷ ಪಿ. ರಾಧಾಕೃಷ್ಣನ್, ಸಮಿತಿ ಕಾರ್ಯದರ್ಶಿ ಹಾಗೂ ಫಾರೆಸ್ಟ್ ಗಾರ್ಡ್ ಸುನೀಲ್, ಬಾಲಕೃಷ್ಣನ್ ಪಾನೂರು, ಮಧುಸೂದನನ್ ಪೇರಡ್ಕ, ಸತ್ಯನ್ ಕೆ, ಮತ್ತು ಶಾಂತಾಕುಮಾರಿ ನೇತೃತ್ವ ವಹಿಸಿದ್ದರು.





