ಕಾಸರಗೋಡು: ಕುವೈತ್‍ನ ಕಾಸರಗೋಡು ಜಿಲ್ಲೆಯ ಜನರ ಗುಂಪಾದ ಕಾಸರಗೋಡು ಎಕ್ಸ್‍ಪ್ಯಾಟ್ರಿಯಟ್ ಅಸೋಸಿಯೇಷನ್ (ಕೆಇಎ)ನ ಚಟುವಟಿಕೆ ಇತರ ಸಂಘಟನೆಗಳಿಗೆ ಮಾದರಿಯಾಗಿರುವುದಾಗಿ ಸಂಸದ ರಾಜ್‍ಮೋಹನ್ ಉಣ್ಣಿತ್ತಾನ್ ತಿಳಿಸಿದ್ದಾರೆ. ಅವರು ಕಾಸರಗೋಡು ನಗರಸಭಾಂಗಣದಲ್ಲಿ ಆಯೋಜಿಸಲಾಗಿದೆ ಕುವೈತ್ ಎಕ್ಸ್‍ಪ್ಯಾಟ್ರಿಯಟ್ ಅಸೋಸಿಯೇಷನ್ ಫೆಸ್ಟ್ ಉದ್ಘಾಟಿಸಿ ಮಾತನಾಡಿದರು.
ಸಂಘಟನೆ ಅಧ್ಯಕ್ಷ ಅಧ್ಯಕ್ಷ ಮುಹಮ್ಮದ್‍ಕುಞ ಸಿ.ಎಚ್ ಅಧ್ಯಕ್ಷತೆ ವಹಿಸಿದ್ದರು. ತ್ರಿಕ್ಕರಿಪುರ ಶಾಸಕ ಎಂ. ರಾಜಗೋಪಾಲನ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಸಂಘಟನೆ ಕಾಸರಗೋಡು ಘಟಕದ ಸದಸ್ಯರ ಮಕ್ಕಳಿಗೆ ವಿದ್ಯಾಭ್ಯಾಸ ಸಹಾಯಧನ ವಿತರಿಸಲಾಯಿತು. ನಗರಸಭಾ ಅಧ್ಯಕ್ಷ ಅಬ್ಬಾಸ್ ಬೀಗಂ, ಸ್ಥಾಯಿ ಸಮಿತಿ ಅಧ್ಯಕ್ಷ ಜಹೀರ್ ಆಸಿಫ್, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ ಅಜೀಜ್ ಕಡಪ್ಪುರ, ಸಾಲಿ, ಯೂನಸ್ ತಳಂಕರ, ಕೆಇಎ ಪ್ರಧಾನ ಕಾರ್ಯದರ್ಶಿ ಅಜೀಜ್, ಕೆಇಎ ವಸತಿ ಸಮಿತಿ ಪ್ರಧಾನ ಕಾರ್ಯದರ್ಶಿ ಅನಿಲ್ ಕಳ್ಳಾರ್, ಕೋಶಾಧಿಕಾರಿ ಮೊಯ್ದು ಇರಿಯ, ಪುಷ್ಪರಾಜನ್ ಉಪಸ್ಥಿತರಿದ್ದರು. ಪ್ರಧಾನ ಸಂಚಾಲಕ ಅಬ್ದುಲ್ಲ ಕಡವತ್ ಸ್ವಾಗತಿಸಿದರು. ಸಂಚಾಲಕ ಮುಹಮ್ಮದ್ ಹದ್ದಾದ್ ವಂದಿಸಿದರು.





