HEALTH TIPS

ಕಾಸರಗೋಡು ಜಿಲ್ಲೆಯ ಜನ ಸುರಕ್ಷಾ ಅಭಿಯಾನ: ಪ್ರಮುಖ ಹಣಕಾಸು ಯೋಜನೆಗಳ ಸಂಪೂರ್ಣ ವ್ಯಾಪ್ತಿಯ ಉದ್ದೇಶ

ಬದಿಯಡ್ಕ: ಭಾರತ ಸರ್ಕಾರದ ಹಣಕಾಸು ಸಚಿವಾಲಯದ ಹಣಕಾಸು ಸೇವೆಗಳ ಇಲಾಖೆಯ (ಡಿಎಫ್‍ಎಸ್) ರಾಷ್ಟ್ರ ವ್ಯಾಪಿ ಹಣಕಾಸು ಸೇರ್ಪಡೆ ಪೂರ್ಣಗೊಳಿಸುವ ಕಾರ್ಯಕ್ರಮದ ಅನುಸಾರ ಗ್ರಾ.ಪಂ. ಮಟ್ಟದಲ್ಲಿ ಪ್ರಮುಖ ಹಣಕಾಸು ಸೇರ್ಪಡೆ ಯೋಜನೆಗಳ ಶೇ. 100 ವ್ಯಾಪ್ತಿಯನ್ನು ಖಚಿತಪಡಿಸಿಕೊಳ್ಳಲು ಕಾಸರಗೋಡು ಜಿಲ್ಲಾಡಳಿತವು ಜನ ಸುರಕ್ಷಾ ಅಭಿಯಾನವನ್ನು ಪ್ರಾರಂಭಿಸಿದೆ.

ಜು. 1 ರಿಂದ ಸೆಪ್ಟೆಂಬರ್ 30 ರವರೆಗೆ  ನಡೆಯಲಿರುವ ಈ ಅಭಿಯಾನವು ಪ್ರಧಾನ ಮಂತ್ರಿ ಜನಧನ ಯೋಜನೆ, ಪ್ರಧಾನಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ, ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ, ಅಟಲ್ ಪಿಂಚಣಿ ಯೋಜನೆಯಂತಹ ಪ್ರಮುಖ ಯೋಜನೆಗಳ ವ್ಯಾಪ್ತಿಯನ್ನು ಪರಿಷ್ಕರಿಸುವ ಮತ್ತು ನಿಷ್ರ್ಕಿಯ ಖಾತೆಗಳಿಗಾಗಿ ಕೆವೈಎಸ್ ಮಾಹಿತಿಗಳನ್ನು ಮರು ಪರಿಶೀಲಿಸುವ ಗುರಿಯನ್ನು ಹೊಂದಿದೆ.

ಈ ಅಭಿಯಾನವನ್ನು ಜಿಲ್ಲಾಧಿಕಾರಿ ಕೆ. ಇನ್ಭಾಶೇಖರ್ ಮಾರ್ಗದರ್ಶನದಲ್ಲಿ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಪ್ರೇಟ್ ಅಖಿಲ್ ಪಿ. ಅವರ ನೇತೃತ್ವದಲ್ಲಿ ಬ್ಯಾಂಕಿಂಗ್ ಸಂಸ್ಥೆಗಳು ಮತ್ತು ಪ್ರಮುಖ ಪಾಲುದಾರರ ಬೆಂಬಲದೊಂದಿಗೆ ಕಾರ್ಯಗತಗೊಳಿಸಲಾಗುತ್ತಿದೆ. ಕಾಸರಗೋಡಿನಲ್ಲಿಅಭಿಯಾನದ ನೋಡಲ್ ಅಧಿಕಾರಿಯಾಗಿ ಪ್ರಮುಖ ಜಿಲ್ಲಾ ವ್ಯವಸ್ಥಾಪಕ ತಿಪ್ಪೇಶ್ ಎಸ್. ಕಾರ್ಯನಿರ್ವಹಿಸುತ್ತಿದ್ದಾರೆ.

ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಪ್ರೇಟ್ ಅಧ್ಯಕ್ಷತೆಯಲ್ಲಿ ಎಲ್ಲ ಬ್ಯಾಂಕ್‍ಗಳ ಪ್ರತಿನಿಧಿಗಳ ಭಾಗವಹಿಸುವಿಕೆಯೊಂದಿಗೆ ಜಿಲ್ಲಾಮಟ್ಟದ ಸಮನ್ವಯ ಸಭೆ ನಡೆಯಿತು. ಇದರ ನಂತರ ಇಲಾಖೆಗಳ ನಡುವೆ ಸುಗಮ ಸಮನ್ವಯವನ್ನು ಖಚಿತಪಡಿಸಿಕೊಳ್ಳಲು ಸ್ಥಳೀಯಾಡಳಿತ ಇಲಾಖೆ, ಕುಟುಂಬಶ್ರೀ ಜಿಲ್ಲಾ ಮಿಷನ್, ನಬಾರ್ಡ್ ಮತ್ತು ಗ್ರಾ.ಪಂ. ಕಾರ್ಯದರ್ಶಿಗಳೊಂದಿಗೆ ಸಭೆ ನಡೆಯಿತು.

ಜಿಲ್ಲೆಯ ಪ್ರತಿಯೊಂದು ಗ್ರಾ.ಪಂ. ಒಂದೇ ಗ್ರಾ.ಪಂ.ನಲ್ಲಿ ಕಾರ್ಯನಿರ್ವಹಿಸುವ ಪಾಲುದಾರ ಬ್ಯಾಂಕ್ ಶಾಖೆಗಳ ಬೆಂಬಲದೊಂದಿಗೆ ನೋಡಲ್ ಬ್ಯಾಂಕ್ ಶಾಖೆಯನ್ನು ಒದಗಿಸಲಾಗಿದೆ. ಈ ಶಾಖೆಗಳು ಆರ್ಥಿಕ ಸಾಕ್ಷರತೆ ಮತ್ತು ದಾಖಲಾತಿ ಶಿಬಿರಗಳನ್ನು ಆಯೋಜಿಸುವ ಮತ್ತು ಕಾರ್ಯಗತಗೊಳಿಸುವ ಜವಾಬ್ದಾರಿಯನ್ನು ಹೊಂದಿವೆ.

ಕಾಸರಗೋಡಿನಾದ್ಯಂತ ಒಟ್ಟು 38 ಗ್ರಾ.ಪಂ.ಗಳು ಈ ಅಭಿಯಾನದ ವ್ಯಾಪ್ತಿಗೆ ಬರುತ್ತವೆ. ಜು. 4ರಿಂದ ಆಗಸ್ಟ್ 29ರ ವರೆಗೆ ಪ್ರತಿ ಪಂಚಾಯಿತಿಯಲ್ಲಿ ಶಿಬಿರಗಳನ್ನು ನಡೆಸಲಾಗುವುದು. ಜು. 17ರ ವರೆಗೆ ಎಂಟು ಶಿಬಿರಗಳನ್ನು ಯಶಸ್ವಿಯಾಗಿ ನಡೆಸಲಾಗಿದೆ. ಜು. 8 ಮತ್ತು 9ರಂದು ನಿಗದಿಯಾಗಿದ್ದ ಶಿಬಿರಗಳನ್ನು ಮುಷ್ಕರಗಳಿಂದಾಗಿ ಮರು ನಿಗದಿಪಡಿಸಬೇಕಾಯಿತು. ಇವುಗಳನ್ನು ಮುಂದಿನ ವಾರ ನಡೆಸಲಾಗುವುದು.

ಲೀಡ್ ಬ್ಯಾಂಕ್ ಕಚೇರಿಗಳ ಅಧಿಕಾರಿಗಳು, ಆರ್‍ಬಿಐ ಪ್ರತಿನಿಧಿಗಳು (ಆಯ್ದ ಸ್ಥಳಗಳಲ್ಲಿ), ಹಣಕಾಸು ಸಾಕ್ಷರತಾ ಸಲಹೆಗಾರರು, ನಬಾರ್ಡ್, ಎಲ್‍ಎಸ್‍ಡಿ ಅಧಿಕಾರಿಗಳು, ಕುಟುಂಬಶ್ರೀ ಸಿಡಿಎಸ್ ಸದಸ್ಯರು ಮತ್ತು ಸ್ಥಳೀಯಾಡಳಿತ ಚುನಾಯಿತ ಪ್ರತಿನಿಧಿಗಳು ಶಿಬಿರಗಳಲ್ಲಿ ಭಾಗವಹಿಸುತ್ತಾರೆ. ಈ ಯೋಜನೆಗಳ ಪ್ರಯೋಜನಗಳನ್ನು ಪಡೆಯುವಲ್ಲಿ ಸಾರ್ವಜನಿಕ ಹಿತಾಸಕ್ತಿಯನ್ನು ಪ್ರತಿಬಿಂಬಿಸುವ ಸಮುದಾಯದ ಭಾಗವಹಿಸುವಿಕೆಯನ್ನು ಪ್ರೋತ್ಸಾಹಿಸಲಾಗುತ್ತದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries