ಬೆಂಗಳೂರು: ಮಹತ್ವಾಕಾಂಕ್ಷಿ ಗಗನಯಾನ ಯೋಜನೆಯ ನೌಕೆಗೆ ಅಳವಡಿಸಲಾಗುವ ಸರ್ವಿಸ್ ಮಾಡ್ಯೂಲ್ ಪ್ರೊಪಲ್ಷನ್ ಸಿಸ್ಟಮ್‌ನ (ಎಸ್‌ಎಂಪಿಎಸ್) ಅಭಿವೃದ್ಧಿ ಕಾರ್ಯವು ಯಶಸ್ವಿಯಾಗಿ ಪೂರ್ಣಗೊಂಡಿದೆ ಎಂದು ಇಸ್ರೊ ಶನಿವಾರ ಮಾಹಿತಿ ನೀಡಿದೆ.
ಎಸ್‌ಎಂಪಿಎಸ್‌ನ ಕಾರ್ಯಕ್ಷಮತೆಯ ಭಾಗವಾಗಿ 350 ಸೆಕೆಂಡ್‌ನಷ್ಟು ಉಷ್ಣತೆ ಕ್ಷಮತೆಯ ಪರೀಕ್ಷೆಯನ್ನು ಶುಕ್ರವಾರ ನಡೆಸಲಾಯಿತು.
ಈ ಸಂದರ್ಭದಲ್ಲಿ ಪ್ರೊಪಲ್ಷನ್ ಸಿಸ್ಟಮ್‌ನ ಒಟ್ಟಾರೆ ಕಾರ್ಯನಿರ್ವಹಣೆಯು ನಿರೀಕ್ಷೆಯಂತೆ ಇತ್ತು ಎಂದು ಇಸ್ರೊ ಪ್ರಕಟಣೆ ತಿಳಿಸಿದೆ.
ತಮಿಳುನಾಡಿನ ಮಹೇಂದ್ರಗಿರಿಯ ಇಸ್ರೊ ಪ್ರೊಪಲ್ಷನ್ ಕೇಂದ್ರದಲ್ಲಿ ಈ ಪರೀಕ್ಷೆಗಳನ್ನು ನಡೆಸಲಾಗಿದೆ ಎಂದು ತಿಳಿಸಿದೆ.
ಪ್ರೊಪಲ್ಷನ್ ಸಿಸ್ಟಮ್ ಅಂದರೆ, ಒತ್ತಡವನ್ನು ಸೃಷ್ಟಿಸಿ ನೂಕುಬಲದ ಮೂಲಕ ನೌಕೆಯನ್ನು ನಿಗದಿತ ಕಕ್ಷೆಗೆ ಅಥವಾ ಪ್ರದೇಶಕ್ಕೆ ಕಳುಹಿಸುವ ಪ್ರಕ್ರಿಯೆ.




