ಕಣ್ಣೂರು: ಶಾಲಾ ಅಡುಗೆಯವರ ಮೇಲೆ ಹಲ್ಲೆ ನಡೆಸಿದ ಘಟನೆಯಲ್ಲಿ ಡಿವೈಎಫ್‍ಐ ಮಹಿಳಾ ನಾಯಕಿ ವಿರುದ್ಧ ಪ್ರಕರಣ ದಾಖಲಾಗಿದೆ. ಪೆರಾವೂರು ಪೋಲೀಸರು ಡಿವೈಎಫ್‍ಐ ಪೆರಾವೂರು ಬ್ಲಾಕ್ ಜೊತೆ ಕಾರ್ಯದರ್ಶಿ ಅಕ್ಷಯ ಮನೋಜ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಕಣ್ಣೂರು ಮನಾಟಣ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಅಡುಗೆಯವರಾದ ವಸಂತ ಅವರ ಮೇಲೆ ಎಸ್‍ಎಫ್‍ಐ-ಡಿವೈಎಫ್‍ಐ ಕಾರ್ಯಕರ್ತರು ಹಲ್ಲೆ ನಡೆಸಿದ್ದರು.
ಎಸ್‍ಎಫ್‍ಐ ನಿನ್ನೆ ಕರೆ ನೀಡಿದ್ದ ಶಾಲಾ ಮುಷ್ಕರದ ಭಾಗವಾಗಿ ಹೊರಗಿನಿಂದ ಬಂದವರು ಸೇರಿದಂತೆ ಡಿವೈಎಫ್‍ಐ ಕಾರ್ಯಕರ್ತರು ಶಾಲೆಗೆ ಬಂದಿದ್ದರು. ಮಧ್ಯಾಹ್ನದ ಊಟ ಸಿದ್ಧವಾದ ನಂತರ ತರಗತಿ ಮುಂದುವರಿಯುತ್ತದೆ ಎಂಬ ನೆಪ ಹೇಳಿ ಕಾರ್ಯಕರ್ತರು ಅಡುಗೆಯವರ ಮೇಲೆ ಹಲ್ಲೆ ನಡೆಸಿದ್ದಾರೆ.
ಮುಷ್ಕರದ ಕಾರಣ ತರಗತಿ ನಡೆಸಬಾರದು ಮತ್ತು ಅಡುಗೆ ಮಾಡಬಾರದು ಎಂದು ಕಾರ್ಯಕರ್ತರು ಒತ್ತಾಯಿಸಿದರು. ಆದರೆ, ಅಡುಗೆ ನೌಕರೆ ವಸಂತ ಇದನ್ನು ವಿರೋಧಿಸಿದಾಗ, ಅವರೊಂದಿಗೆ ವಾಗ್ವಾದ ನಡೆಯಿತು. ನಂತರ ಅಡುಗೆ ಮಾಡಲು ಸಿದ್ದಪಡಿಸಿದ್ದ ಅಕ್ಕಿ, ಅನ್ನಗಳನ್ನು ಕಾರ್ಯಕರ್ತರು ಎಸೆದರು ಎನ್ನಲಾಗಿದೆ.
ಅಡುಗೆಯವರ ದೂರಿನ ಮೇರೆಗೆ ಪೋಲೀಸರು ಅಕ್ಷಯ ಮನೋಜ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಡಿವೈಎಫ್‍ಐ ನಾಯಕಿ ತನ್ನ ಕೈಯನ್ನು ದೂರ ಸರಿಸಿದಾಗ, ಬಿಸಿನೀರು ಆಕೆಯ ಕಾಲಿನ ಮೇಲೆ ಬಿದ್ದು ಸುಟ್ಟುಹೋಯಿತು ಎಂದು ದೂರಿನಲ್ಲಿ ಹೇಳಲಾಗಿದೆ.






