ಮುಳ್ಳೇರಿಯ: ಆಟಿ ಅಮಾವಾಸ್ಯೆಯ ಹಿನ್ನೆಲೆಯಲ್ಲಿ ಆದೂರು ಗುತ್ತಲ್ಲಿ ಇತ್ತೀಚೆಗೆ ಆಟಿ ಕಷಾಯ ವಿತರಣೆ ನಡೆಯಿತು. ಆದೂರು ಗುತ್ತು ಸೋಮಶೇಖರ ರೈ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭವನ್ನು ಸುಬ್ರಹ್ಮಣ್ಯ ಭಟ್ ಆಲಂತ್ತಡ್ಕ ಉದ್ಘಾಟಿಸಿದರು. ಕಿರಣ್ ಮಾಡ ಹೊಸಮನೆ ಶುಭಹಾರೈಸಿದರು. ನಾರಾಯಣ ನಾಯ್ಕ ಕುಂಡಲ, ಜಯಂತಿ ರೈ ಉಪಸ್ಥಿತರಿದ್ದರು. ಚಂದ್ರನಾಥ ರೈ ಬೇತಾಳಮೂಲೆ ಸ್ವಾಗತಿಸಿ, ವಂದಿಸಿದರು.
ಈ ಸಂದರ್ಭ ರವೀಂದ್ರ ರೈ ಮಲ್ಲಾವರ ಅವರು ಆಟಿ ಕಷಾಯ ತಯಾರಿಸಿ ವಿತರಿಸಿದರು. ರಂಗನಟರೂ, ಕೇರಳ ತುಳು ಅಕಾಡೆಮಿ ಮಾಜಿ ಸದಸ್ಯರೂ ಆಗಿರುವ ರವೀಂದ್ರ ರೈ ಕಳೆದ ಎರಡು ದಶಕಗಳಿಗಿಂತಲೂ ಹೆಚ್ಚಿನ ಕಾಲಗಳಿಂದ ಆಟಿ ಕಷಾಯ ತಯಾರಿಸಿ ಉಚಿತವಾಗಿ ವಿತರಿಸುತ್ತಿದ್ದಾರೆ.






