ಬದಿಯಡ್ಕ: ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಗಳು ಅಂತಿಮ ಹಂತ ತಲಪುತ್ತಿದೆ. ಈ ಸಂದರ್ಭದಲ್ಲಿ ಕ್ಷೇತ್ರದ ಸಾನಿಧ್ಯವೃದ್ಧಿ, ಸಮಾಜದ ಐಕ್ಯತೆ, ಉನ್ನತಿ ಮತ್ತು ಲೋಕಕಲ್ಯಾಣವನ್ನು ಉದ್ದೇಶವಾಗಿರಿಸಿ ಆ. 17 ರಂದು ಭಾನುವಾರ ಶಕ್ತಿ ಪಂಚಾಕ್ಷರಿ ಯಾಗ ನಡೆಯಲಿದೆ.
ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ 9: ಕ್ಕೆ ಯಾಗ ಆರಂಭ 11:30 ಕ್ಕೆ ಪೂರ್ಣಹುತಿ, ನಂತರ ಧಾರ್ಮಿಕ ಸಭೆ ನಡೆಯಲಿದೆ. 12:30ಕ್ಕೆ ಮಹಾಪೂಜೆ ಪ್ರಸಾದ ವಿತರಣೆ ಪ್ರಸಾದ ಭೋಜನ ನಡೆಯಲಿದೆ.
ಶಕ್ತಿ ಪಂಚಾಕ್ಷರಿ ಯಾಗದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ಕ್ಷೇತ್ರದಲ್ಲಿ ಜರಗಿತು. ಆಡಳಿತ ಮೊಕ್ತೇಸರ ವಕೀಲ ವೆಂಕಟರಮಣ ಭಟ್ ಚಂಬಲ್ತಿಮಾರ್, ಮೊಕ್ತೇಸರರಾದ ಪಿ.ಜಿ. ಜಗನ್ನಾಥ ರೈ, ಸೀತಾರಾಮ ನವಕ್ಕಾನ, ಕೃಷ್ಣ ಬದಿಯಡ್ಕ, ಮಾಜಿ ಆಡಳಿತ ಮೊಕ್ತೇಸರ ಟಿ.ಕೆ.ನಾರಾಯಣ ಭಟ್ ಪಂಜಿತಡ್ಕ, ಪಿ.ಜಿ. ಚಂದ್ರಹಾಸ ರೈ, ಸೇವಾ ಸಮಿತಿ ಕಾರ್ಯದರ್ಶಿ ನಿರಂಜನ್ ರೈ ಪೆರಡಾಲ, ಜೀಣೋದ್ಧಾರ ಸಮಿತಿ ಕೋಶಾಧಿಕಾರಿ ಸೂರ್ಯನಾರಾಯಣ ಬಿ., ಜೀರ್ಣೋದ್ಧಾರ ಸಮಿತಿ ಪದಾಧಿಕಾರಿಗಳಾದ ಡಾ. ಶ್ರೀಶ ಕುಮಾರ್ ಪಂಜಿತ್ತಡ್ಕ, ಗಣೇಶ ಪ್ರಸಾದ್ ಕಡ್ಡಪ್ಪು, ಜಗನ್ನಾಥ ರೈ ಕೊರೆಕ್ನಾನ, ಭಾಸ್ಕರ ಪಂಜಿತಡ್ಕ, ಸತೀಶ್ ಪುದ್ಯೋಡು, ಜಗದೀಶ್ ಪೆರಡಾಲ, ಮಾತೃ ಸಮಿತಿ ಪದಾಧಿಕಾರಿಗಳು ಸಂಘ-ಸಂಸ್ಥೆ ಪದಾಧಿಕಾರಿಗಳು ಸದಸ್ಯರು ಭಕ್ತರು ಅರ್ಚಕವೃಂದ, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.




.jpg)
