ಮಂಜೇಶ್ವರ: ಕಳಿಯೂರು ಸಂತ ಜೋಸೆಫರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2025-26 ನೇ ಸಾಲಿನ ರಕ್ಷಕ ಶಿಕ್ಷಕ ಸಂಘದ ಮಹಾಸಭೆ ನಡೆಯಿತು. ಜೈನ್ ಪ್ರೌಢಶಾಲೆ ಮೂಡಬಿದ್ರೆಯ ನಿವೃತ್ತ ಮುಖ್ಯೋಪಾಧ್ಯಾಯ ಮುನಿರಾಜ ರೆಂಜಾಳ ಅವರು ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಹೆತ್ತವರಿಗೆ ರಕ್ಷಕ ಮತ್ತು ಶಿಕ್ಷಕರ ನಡುವೆ ಇರುವ ಬಾಂಧವ್ಯ ಹೇಗಿರಬೇಕು ಮುಂತಾದ ವಿಷಯಗಳ ಬಗ್ಗೆ ಮಾಹಿತಿ ನೀಡಿದರು. ಮಾರ್ಟಿನ್ ಡಿಸೋಜರವರು ಗತ ಸಭೆಯ ವರದಿಯನ್ನು ವಾಚಿಸಿದರು.
ಈ ಸಂದರ್ಭ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಪಿಟಿಎ ಅಧ್ಯಕ್ಷರಾಗಿ ಜಯಪ್ರಕಾಶ್ ಡಿಸೋಜ, ಎಂ. ಪಿ. ಟಿ. ಎ ಅಧ್ಯಕ್ಷೆಯಾಗಿ ಸುಜಾತ ಆಯ್ಕೆಯಾದರು. ಕಳೆದ ವರ್ಷ ಸೇವೆ ಸಲ್ಲಿಸಿದ ಪಿಟಿಎ ಅಧ್ಯಕ್ಷ ಸೀತಾರಾಮ ಬೇರಿಂಜ, ಎಂ.ಪಿ.ಟಿ.ಎ. ಅಧ್ಯಕ್ಷೆ ಸೀತಾಲಕ್ಷ್ಮಿ, ಎಸ್. ಎಸ್. ಜಿ. ಕನ್ವೀನರ್ ಜಯಪ್ರಕಾಶ್ ಡಿಸೋಜ ಅವರಿಗೆ ಪ್ರಶಸ್ತಿ ಫಲಕ ಮತ್ತು ಶಾಲು ಹೊದಿಸಿ ಗೌರವಿಸಲಾಯಿತು. ವೇದಿಕೆಯಲ್ಲಿ ಶಾಲಾ ಸಂಚಾಲಕ ವಂ.ಫಾ ಬೇಸಿಲ್ ವಾಸ್, ನಿವೃತ್ತ ಮುಖ್ಯೋಪಾಧ್ಯಾಯ.ಶ್ರೀಪತಿ ಮಾಸ್ತರ್, ಇಗರ್ಜಿಯ ಪಾಲನಾ ಮಂಡಳಿಯ ಉಪಾಧ್ಯಕ್ಷ ರಾಜೇಶ್ ಡಿಸೋಜಾ ಉಪಸ್ಥಿತರಿದ್ದರು. ಸುನಿತಾ ಕ್ರಾಸ್ತಾ ಸ್ವಾಗತಿಸಿ, ನಿಶಾ ವೀಣಾ ವಂದಿಸಿದರು. ಜೆಸಿಂತಾ ಕ್ರಾಸ್ತಾ ಕಾರ್ಯಕ್ರಮ ನಿರೂಪಿಸಿದರು.




.jpg)
.jpg)
.jpg)
