ಪೆರ್ಲ: ಕಾಟುಕುಕ್ಕೆ ಶ್ರೀ ಸುಬ್ರಾಯ ದೇವಸ್ಥಾನದ ನೂತನ ಆಡಳಿತ ಮಂಡಳಿಗೆ ಆಯ್ಕೆಯಾದವರು ಶನಿವಾರ ದೇವಸ್ವಂ ಬೋರ್ಡ್‍ನ ನೀಲೇಶ್ವರದಲ್ಲಿರುವ ಸಹಾಯಕ ಕಮಿಷನರ್ ಕಾರ್ಯಾಲಯದಲ್ಲಿ ಅಧಿಕಾರ ಸ್ವೀಕರಿಸಿದರು.
ನೂತನ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಪ್ರಾಂಶುಪಾಲ ಕೆ.ಪದ್ಮನಾಭ ಶೆಟ್ಟಿ ಚಕ್ಕಿತ್ತಡ್ಕ, ಟ್ರಸ್ಟಿಗಳಾಗಿ ಕೆ. ನಾರಾಯಣನ್ ಬೋಳುಬೈಲು, ಯೋಗೀಶ್ ಖಂಡೇರಿ ಭಂಡಾರದಮನೆ,ನಾರಾಯಣ.ಬಿ. ಬಾಳೆಮೂಲೆ, ಕೃಷ್ಣ ನಾಯ್ಕ ವಾಟೆಡ್ಕ ಅಧಿಕಾರ ವಹಿಸಿಕೊಂಡರು.





