ಕಾಸರಗೋಡು: ಶ್ರೀ ಸತ್ಯಸಾಯಿ ಸೇವಾ ಬಳಗ ಪೆರ್ಲ ಇವರಿಂದ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕøತಿಕ ಪ್ರತಿಷ್ಠಾನದ ಸಾಂಸ್ಕೃತಿಕ ಭವನದಲ್ಲಿ ಉಚಿತ ಆಯುರ್ವೇದ ವೈದ್ಯಕೀಯ ಶಿಬಿರ ನಡೆಯಿತು. ಈ ಶಿಬಿರವನ್ನು ಕಲಾಭಿಮಾನಿಗಳು ಹಾಗೂ ಕಲಾ ವಿಮರ್ಶಕರಾದ ಕುಮಾರ ಸುಬ್ರಹ್ಮಣ್ಯ ಭಟ್ ಮುಳಿಯಾಲ ಹಾಗೂ ಮೂರ್ತಿ ದೇರಾಜೆ ಉದ್ಘಾಟಿಸಿದರು. ಡಾ. ಕೃಷ್ಣಮೋಹನ ಪೆರ್ಲ ಹಾಗೂ ಡಾ. ಸತ್ಯನಾರಾಯಣ ಬಿ. ಇವರು ರೋಗಿಗಳನ್ನು ತಪಾಸಣೆ ನಡೆಸಿದರು.
ಶ್ರೀ ಗೋಪಾಲಕೃಷ್ಣ ಫಾರ್ಮ್ ಸಿ ಕುಂಬಳೆ, ಡಾಕ್ಟರ್ ರವಿ ನಾರಾಯಣ ಸಂಜೀವಿನಿ ಕ್ಲಿನಿಕ್ ನೆಹರು ನಗರ ಪುತ್ತೂರು, ಶ್ರೀ ಸದ್ಗುರು ಡಿಸ್ಟ್ರಿಬ್ಯೂಟರ್ ಸುಮತಿ ಕಾಂಪ್ಲೆಕ್ಸ್ ಪುತ್ತೂರು ,ಸಿಕೇಮ್ ಫಾರ್ಮ್‍ಸಿ ಬೆಂಗಳೂರು, ಸದಾಶಿವ ಭಟ್. ಸತ್ಯನಾರಾಯಣ ಹೆಗ್ಡೆ ಪೆರ್ಲ ಹಾಗೂ ಜಗದೀಶ್ ಸಹಕಾರವಿತ್ತರು. ಪ್ರತಿಷ್ಠಾನದ ಅಧ್ಯಕ್ಷ ರಾಮಕೃಷ್ಣಮಯ್ಯ, ಶ್ಯಾಮ್ ಕುಂಚಿನಡ್ಕ ಮೊದಲಾದವರು ಉಪಸ್ಥಿತರಿದ್ದರು. ಶಿಬಿರಾರ್ಥಿಗಳಿಗೆ ತಪಾಸಣೆಯೊಂದಿಗೆ ಔರ್ಷ ವಿತರಿಸಲಾಯಿತು.





