ಪೆರ್ಲ: ಬಾಳೆಮೂಲೆ ಸರ್ಕಾರಿ ಕಿರಿಯ ಪ್ರಾಥಮಿ ಶಾಲೆಗೆ ಜೀವ ವಿಮಾ ನಿಗಮದ ಮುಳ್ಳೇರಿಯಾ ಶಾPಖೆ ವತಿಯಿಂದ ಕೊಡಮಾಡಲಾದ ಪ್ರಿಂಟರ್ ಹಸ್ತಾಂತರ ಸಮಾರಂಭ ಶಾಲೆಯಲ್ಲಿ ನಡೆಯಿತು.
ಕಳೆದ ಶೈಕ್ಷಣಿಕ ವರ್ಷದಲ್ಲಿ ಶಾಲೆಯು ಎಲ್‍ಐಸಿಯ 'ಬಿಮಾ ಸ್ಕೂಲ್' ಯೋಜನೆಗೆ ಆಯ್ಕೆಯಾಗಿತ್ತು. ಶಾಖಾ ಪ್ರಬಂಧಕ ಅಭಿಲಾಶ್ ಸಿಎ ಅವರು ಬಾಳೆಮೂಲೆ ಶಾಲಾ ಮುಖ್ಯ ಶಿಕ್ಷಕ ರಾಜೇಶ್ ಬಿ ಅವರಿಗೆ ಪ್ರಿಂಟರ್ ಹಸ್ತಾಂತರಿಸಿದರು. ಈ ಸಂದರ್ಭ ಶಾಲಾ ಎಸ್ ಎಸ್ ಜಿ ಅಧ್ಯಕ್ಷ ಬಟ್ಯಮಾಸ್ಟರ್ ಉಪಾಧ್ಯಕ್ಷ ಮಾಹಾಲಿಂಗ ಕುರಿಯತಡ್ಕ ಶಾಲಾ ಅಧ್ಯಾಪಕ ವೃಂದ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಶಾಲಾ ಶಿಕ್ಷಕಿ ಸಹನಾ ಸ್ವಾಗತಿಸಿದರು. ಅಧ್ಯಾಪಕ ಮಹಮ್ಮದ್ ಫೈಸಲ್ ವಂದಿಸಿದರು.





