ಮಂಜೇಶ್ವರ: ಹೊಸಂಗಡಿ ಸನಿಹದ ಪಿರಾರಮೂಲೆ ನಿವಾಸಿ, ನಿವೃತ್ ಮುಖ್ಯ ಶಿಕ್ಷಕ ಗೋವಿಂದ ಶೆಟ್ಟಿಗಾರ್(78)ನಿಧನರಾದರು. ಧಾರ್ಮಿಕ, ಸಾಮಾಜಿಕ ರಂಗಗಳಲ್ಲಿ ಸಕ್ರಿಯರಾಗಿದ್ದ ಇವರು, ಬಂಗ್ರಮಂಜೇಶ್ವರ ಶ್ರೀ ವೀರಭದ್ರ ದೇವಸ್ಥಾನ ಆಡಳಿತ ಸಮಿತಿ ಮಾಜಿ ಅಧ್ಯಕ್ಷರಾಗಿದ್ದರು. ಸಿಪಿಎಂ ಬೆಂಬಲಿಗರಾಗಿದ್ದ ಇವರು, ಸಿಪಿಎಂ ಮಂಜೇಶ್ವರ ಪ್ರಾದೇಶಿಕ ಸಮಿತಿ ಮುಖಂಡರಾಗಿದ್ದರು. ಹೊಸಂಗಡಿಯ ಬಿ.ಎಂ ರಾಮಯ್ಯ ಶೆಟ್ಟಿ ಗ್ರಂಥಾಲಯ ಸ್ಥಾಪನೆಗೆ ಮಹತ್ವದ ಕೊಡುಗೆ ನೀಡಿದ್ದರು. ಅವರು ಪತ್ನಿ, ಪುತ್ರ, ಪುತ್ರಿಯನ್ನು ಅಗಲಿದ್ದಾರೆ.





