ಕಾಸರಗೋಡು: ಶ್ರೀಕ್ಷೇತ್ರ ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಕಾಸರಗೋಡು ತಾಲೂಕು ಘಟಕ ನೇತೃತ್ವದಲ್ಲಿ ಪ್ರತಿ ವರ್ಷ ನಡೆಸಲಾಗುವ ಒಂದು ತಿಂಗಳ ಕಾಲ ರಾಮಾಯಣ ಮಾಸಾಚರಣೆಯ ಮನೆ ಮನೆ ಭಜನಾ ಸಂಕೀರ್ತನೆ ಆರಂಭಗೊಂಡಿತು.
ಕಾಳ್ಯಂಗಾಡು ನಿವಾಸಿ ಪುಷ್ಪರಾಜ್ ಹೇಮಲತ ಅವರ ನಿವಾಸದಲ್ಲಿ ನಡೆದ ಸಮಾರಂಭದಲ್ಲಿ ಭಜನಾ ಪರಿಷತ್ತಿನ ಗೌರವಾಧ್ಯಕ್ಷ ಜಯಾನಂದ ಕುಮಾರ್ ಹೊಸದುರ್ಗ ದೀಪ ಪ್ರಜ್ವಲಿಸಿ ಚಾಲನೆ ನೀಡಿದರು. ಅಧ್ಯಕ್ಷ ಡಾ. ಕೆ.ಎನ್.ವೆಂಕಟ್ರಮಣ ಹೊಳ್ಳ ನೇತೃತ್ವ ವಹಿಸಿದ್ದರು. ಸಂಕೀರ್ತನಾ ಮಹಿಳಾ ಭಕ್ತವೃಂದ ಮತ್ತು ಶ್ರೀ ಶಕ್ತಿ ಬಾಲವೃಂದ ಉಳಿಯತ್ತಡ್ಕ ಇವರಿಂದ ಭಜನಾ ಸೇವೆ ಜರಗಿತು. ಈ ಸಂದರ್ಭ ತುಕಾರಾಮ ಆಚಾರ್ಯ ಕೆರೆಮನೆ, ಅಚ್ಚುತ ಆಚಾರ್ಯ ಕೂಡ್ಲು, ಯಶೋಧಾ, ಶೋಭಾ, ಸವಿತಾ, ನೇತ್ರಾವತಿ, ಜಯಂತಿ, ದೃಶ್ಯ, ಚರಿಷ್ಮಾ ಮೊದಲಾದವರು ಉಪಸ್ಥಿತರಿದ್ದರು.


