ಕಾಸರಗೋಡು: ಕೇಂದ್ರೀಯ ವಿದ್ಯಾಲಯಗಳಲ್ಲಿ ತರಗತಿಗಳು ಪ್ರಾರಂಭವಾಗಿ ತಿಂಗಳುಗಳು ಕಳೆದರೂ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳು ಲಭ್ಯವಿಲ್ಲದಿರುವುದನ್ನು ವಿರೋಧಿಸಿ ಸ್ಟೂಡೆಂಟ್ ಫೆಡರೇಶನ್ ಆಫ್ ಇಂಡಿಯಾ(ಎಸ್‍ಎಫ್‍ಐ) ರಾಜ್ಯದ ಎಲ್ಲಾ ಕೇಂದ್ರೀಯ ವಿದ್ಯಾಲಯಗಳ ಎದುರ ಪ್ರತಿಭಟನಾ ಮೆರವಣಿಗೆ ನಡೆಸಿತು.
ಕಾಸರಗೋಡು ಕೇದ್ರೀಯ ವಿದ್ಯಾಲಯದ ಎದುರು ನಡೆದ ಧರಣಿಯನ್ನು ಜಿಲ್ಲಾಧ್ಯಕ್ಷೆ ರಿಷಿತಾ ಸಿ ಪವಿತ್ರನ್ ಉದ್ಘಾಟಿಸಿ ಮಾತನಾಡಿ, ಕೇಂದ್ರೀಯ ವಿದ್ಯಾಲಯಗಳ 5 ಮತ್ತು 8 ನೇ ತರಗತಿಯ ವಿದ್ಯಾರ್ಥಿಗಳು ಪ್ರಸಕ್ತ ಪಠ್ಯ ಪುಸ್ತಕ ಲಭ್ಯವಾಗದೆ ಸಮಸ್ಯೆ ಎದುರಿಸುತ್ತಿದ್ದಾರೆ. ಮೊದಲ ತ್ರೈಮಾಸಿಕ ಪರೀಕ್ಷೆಗಳಿಗೆ ಕೆಲವೇ ದಿನಗಳು ಬಾಕಿ ಇರುವಾಗ, ಪುಸ್ತಕಗಳನ್ನು ವಿತರಿಸಬೇಕಾದ ಎನ್‍ಸಿಆರ್‍ಟಿ ಧೋರಣೆ ಖಂಡನೀಯ ಎಂದು ತಿಳಿಸಿದರು. ಎಂ. ಅನುರಾಜ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಸಂಘಟನೆ ಜಿಲ್ಲಾ ಕಾರ್ಯದರ್ಶಿ ಶ್ರೀಹರಿ ಬೇಪ್ ಹಾಗೂ ಜಿಲ್ಲಾ ಸಮಿತಿ ಸದಸ್ಯರಾದ ಶ್ರೀಹರಿ ಪನಯಾಲ್, ರೋಶಿನ್ ಕೆ.ವಿ, ಮಧುರಾಜ್, ಆಕಾಶ್, ಶ್ರೀತಿನ್ ಉಪಸ್ಥಿತರಿದ್ದರು. ಜಿಲ್ಲಾ ಜತೆ ಕಾರ್ಯದರ್ಶಿ ಪಿ ಇಮ್ಯಾನುವೆಲ್ ಸ್ವಾಗತಿಸಿದರು.





