ಕಾಸರಗೋಡು: ಬಿ.ಎಂ.ಎಸ್.ಆರ್.ಎ ಕಾಸರಗೋಡು ಜಿಲ್ಲಾ ವಾರ್ಷಿಕ ಸಮ್ಮೇಳನ ಕಾಸರಗೋಡಿನ ಹೊಸ ಬಸ್ ನಿಲ್ದಾಣದ ಬಳಿಯ ಆರ್. ಕೆ. ಮಾಲ್‍ನಲ್ಲಿ ನಡೆಯಿತು. ಬೆಳಗ್ಗೆ ಧ್ವಜಾರೋಹಣ ನಡೆಯಿತು. ನಂತರ ನಡೆದ ಸಮಾರಂಭದಲ್ಲಿ ನಂತರ, ಬಿಎಂಎಸ್ ರಾಜ್ಯ ಉಪಾಧ್ಯಕ್ಷ, ವಕೀಲ ಸುರೇಶ್ ಕುಮಾರ್ ಕೆ. ಉದ್ಘಾಟಿಸಿದರು. ಬಿ.ಎಂ.ಎಸ್.ಆರ್.ಎ ಕಾಸರಗೋಡು ಜಿಲ್ಲಾಧ್ಯಕ್ಷ ಹರಿಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು. ಬಿಎಂಎಸ್ ಜಿಲ್ಲಾಧ್ಯಕ್ಷ ಉಪೇಂದ್ರ ಕೊಟಕಣಿ, ಬಿಎಂಎಸ್ ಕಾಸರಗೋಡು ಪ್ರಾದೇಶಿಕ ಕಾರ್ಯದರ್ಶಿ ಬಾಬುಮೋನ್, ಬಿಎಂಎಸ್ ರಾಜ್ಯ ಸಮಿತಿ ಕಾರ್ಯದರ್ಶಿ ಮನೇಶ್ ಬಿ. ಉಪಸ್ಥಿತರಿದ್ದರು. ಬಿಎಂಎಸ್ ಜಿಲ್ಲಾ ಕಾರ್ಯದರ್ಶಿ ಅರುಣ್‍ಕೆ.ವಿ.ಬಾಬು ಮುಖ್ಯ ಭಾಷಣ ಮಾಡಿದರು. ಬಿಎಂಎಸ್ ಜಿಲ್ಲಾ ಉಪಾಧ್ಯಕ್ಷ ಅನಿಲ್ ಕುಮಾರ್, ಕೋಶಾಧಿಕಾರಿ ಅರುಣ್ ವರದಿ ಮಂಡಿಸಿದರು. ಬಿಎಂಎಸ್ ಜಿಲ್ಲಾ ಪ್ರಭಾರಿ ಜೈದೀಪ್ ಕಣ್ಣೂರು ಸಂಘಟನಾ ಚರ್ಚೆ ಮತ್ತು ಜಿಲ್ಲಾ ಪದಾಧಿಕಾರಿಗಳ ಚುನಾವಣೆ ನಡೆಸಿಕೊಟ್ಟರು. ನೂತನ ಜಿಲ್ಲಾಧ್ಯಕ್ಷರಾಗಿ ಹರಿಪ್ರಸಾದ್. ಕೆ, ಕಾರ್ಯದರ್ಶಿಯಾಗಿ ತೇಜಸ್. ಕೆ, ಮತ್ತು ಕೋಶಾಧಿಕಾರಿಯನ್ನಾಗಿ ಅರುಣ್. ಬಿ ಅವರನ್ನು ಆಯ್ಕೆ ಮಾಡಲಾಯಿತು. ಬಿಎಂಎಸ್ ಜಿಲ್ಲಾ ಕಾರ್ಯದರ್ಶಿ ತೇಜಸ್ ಸ್ವಾಗತಿಸಿದರು. ಬಿ.ಎಂ.ಎಸ್.ಆರ್.ಎ. ಜಿಲ್ಲಾ ಜತೆ ಕಾರ್ಯದರ್ಶಿ ಸಂದೀಪ್ ಬದಿಯಡ್ಕ ವಂದಿಸಿದರು.





