ಕಾಸರಗೋಡು: ನಿರಂತರ ಸುರಿಯುತ್ತಿರುವ ಮಳೆಗೆ ಜಿಲ್ಲೆಯಲ್ಲಿ ಸಮುದ್ರಕೊರೆತದಿಂದ ಅತಿಯಾದ ಹಾನಿಯುಂಟಾಗಿದೆ. ಕೀಯೂರು ಕಡಪ್ಪುರ, ಮಂಗಲ್ಪಾಡಿಯ ಪೆರಿಂಗಾಡಿ ಪ್ರದೇಶದಲ್ಲಿ ಸಮುದ್ರ ಕೊರೆತದಿಂದ ಅತಿಯಾದ ಹಾನಿಯುಂಟಾಗಿದೆ. ಪೆರಿಂಗಡಿಯಲ್ಲಿ ಕಡಪ್ಪುರಕ್ಕಿರುವ ಸಂಪರ್ಕ ರಸ್ತೆ ಸಮುದ್ರ ಪಾಲಾಗಿದೆ. ಜತೆಗೆ ಬಿರುಸಿನ ಗಾಳಿಗೆ ಬೃಹತ್ ಮರಗಳು ವಿದ್ಯುತ್ ತಂತಿಗೆ ಬಿದ್ದು, ವಿದ್ಯುತ್ ಸಂಪರ್ಕವೂ ಅಸ್ತವ್ಯಸ್ತಗೊಂಡಿದೆ.
ಮೇ 20ರಿಂದ ಜುಲೈ20ರ ತನಕದ ಎರಡು ತಿಂಗಳ ಕಾಲಾವಧಿಯಲ್ಲಿ ವಾಡಿಕೆಗಿಂತ ಅಧಿಕ ಮಳೆ ಲಭಿಸಿದೆ. ಮೇ 24ರಿಂದ ಈ ತನಕ ಕಾಸರಗೋಡು ಜಿಲ್ಲೆಯಲ್ಲಿ 2772ಮಿಲ್ಲಿಮೀಟರ್ ಮಳೆ ಲಭಿಸಿದೆ. ಇದು ವಾಡಿಕೆಗಿಂತ 58ಶೇ.ಅಧಿಕವಾಗಿದೆ.
ಇನ್ನೂ ಒಂದು ವಾರ ಕಾಲ ಬಿರುಸಿನ ಮಳೆ ಮುಂದುವರಿಯಲಿದ್ದು, ಜುಲೈ 23ರ ತನಕ ಗಂಟೆಗೆ 40ರಿಂದ 50 ಕೀ. ಮೀ ವೇಗದಲ್ಲಿ ಪ್ರಬಲ ಗಾಳಿ ಬೀಸುವ ಸಾಧ್ಯತೆಯಿದೆ. ಜುಲೈ 24 ಹಾಗೂ 25ರಂದು ಏಕ ಕಾಲಕ್ಕೆ 50-60ಕೀ ಮೀ ವೇಗದ ಗಾಳಿಯೊಂದಿಗೆ ಮಳೆ ಸುರಿಯುವ ಸಾಧ್ಯತೆ ಬಗ್ಗೆ ಕೇಂದ್ರ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.




