ಕಾಸರಗೋಡು: ರೈಲು ಪ್ರಯಾಣದ ಮಧ್ಯೆ ಪ್ರಯಾಣಿಕರೊಬ್ಬರ ನಗದು ಹಾಗೂ ದಾಖಲೆ ಒಳಗೊಂಡ ಬ್ಯಾಗ್ ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿ ರೈಲ್ವೆ ಟ್ರ್ಯಾಕ್‍ಮ್ಯಾನ್, ನಾರಾಯಣಪುರ್ ನಿವಾಸಿ ಸುಬೋದ್‍ಕುಮಾರ್ ಎಂಬಾತನನ್ನು ಕಾಸರಗೋಡು ರೈಲ್ವೆ ಪೊಲೀಸರು ಬಂಧಿಸಿದ್ದಾರೆ.
ನೆಲ್ಲಿಕುಂಜೆ ನಿವಾಸಿ ಅಶೋಕ್‍ಶೆಟ್ಟಿ ಎಂಬವರ ದೂರಿನ ಮೇರೆಗೆ ಈ ಬಂಧನ. ಜುಲೈ 18ರಂದು ಘಟನೆ ನಡೆದಿದೆ. ಚಂಡೀಗಢದಿಂದ ಕೊಚ್ಚುವೇಳಿ ತೆರಳುತ್ತಿದ್ದ ರೈಲಿನಲ್ಲಿ ಆಗಮಿಸಿದ್ದ ಅಶೋಕ ಶೆಟ್ಟಿ ಕಾಸರಗೋಡಿನಲ್ಲಿ ಇಳಿದು ನೋಡಿದಾಗ ನಗದು ಹಾಗೂ ದಾಖಲೆ ಒಳಗೊಂಡ ಬ್ಯಾಗ್ ಕಳವಿಗೀಡಾಗಿತ್ತು. ಇವರು ನೀಡಿದ ದೂರಿನನ್ವಯ ತಪಾಸಣೆ ನಡೆಸಿದಾಗ ಸಿಸಿ ಕ್ಯಾಮರಾ ದೃಶ್ಯಾವಳಿಯಲ್ಲಿ ರೈಲ್ವೆ ಸಿಬ್ಬಂದಿಯೇ ಬ್ಯಾಗಿನೊಂದಿಗೆ ಸಾಗುತ್ತಿರುವ ದೃಶ್ಯ ಲಭ್ಯವಾಗಿತ್ತು. ಈತನನ್ನು ಸೆರೆಹಿಡಿದು ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ಕಳವು ಬೆಳಕಿಗೆ ಬಂದಿದೆ.




