ಪೆರ್ಲ: ಪರಂಪರಾಗತ ಬತ್ತ ಗದ್ದೆಗಳನ್ನು ಆಚಾರ ವಿಚಾರಗಳನ್ನು ಯುವ ತಲೆಮಾರಿಗೆ ಪರಿಚಯಿಸುವ ನಿಟ್ಟಿನಲ್ಲಿ ಎಂ.ಕೆ ಬಾಲಕೃಷ್ಣ ಗ್ರಂಥಾಲಯ ಮತ್ತು ವಾಚನಾಲಯ ಸ್ವರ್ಗ ಇದರ ಆಶ್ರಯದಲ್ಲಿ ಆಯೋಜಿಸಿದ "ಕೆಸರು ಗದ್ದೆಯಲ್ಲಿ ಒಂದು ದಿನ" ಎಂಬ ವೈವಿಧ್ಯಮಯ ಕಾರ್ಯಕ್ರಮದಲ್ಲಿ ಪ್ರಾಯ ಬೇಧ ಮರೆತು ಒಗ್ಗೂಡಿ ಕುಣಿದು ಕುಪ್ಪಳಿಸಿ ಅವಿಸ್ಮರಣೀಯ ಕಾರ್ಯಕ್ರಮವಾಯಿತು.
ಬಜಕುಡೆ ದಿ.ಕೊರಗಪ್ಪ ನಾಯ್ಕರವರ ಬಯಲು ಗದ್ದೆಯಲ್ಲಿ ನಡೆದ ಕಾರ್ಯಕ್ರಮವನ್ನು ಮಂಜೇಶ್ವರ ತಾಲೂಕು ಲೈಬ್ರೆರಿ ಕೌನ್ಸಿಲ್ ಅಧ್ಯಕ್ಷೆ ಶ್ರೀಕುಮಾರಿ ಕೆ ಉದ್ಘಾಟಿಸಿದರು.ಎಂ.ಕೆ ಬಾಲಕೃಷ್ಣ ಗ್ರಂಥಾಲಯ ಮತ್ತು ವಾಚನಾಲಯದ ಅಧ್ಯಕ್ಷ ರವಿರಾಜ್ ಎಸ್ ಅಧ್ಯಕ್ಷತೆ ವಹಿಸಿದ್ದರು. ಎಣ್ಮಕಜೆ ಗ್ರಾಮ ಪಂಚಾಯತಿ ಸದಸ್ಯ ರಾಮಚಂದ್ರ ಎಂ,ನಿವೃತ್ತ ಶಿಕ್ಷಕ ಬಟ್ಯ ಮಾಸ್ಟರ್, ಸಿ.ಡಿ.ಎಸ್ ಉಪಾಧ್ಯಕ್ಷೆ ಶಶಿಕಲಾ ಕೆ ಶುಭಾಶಂಸನೆಗೈದರು. ಈ ಸಂದರ್ಭದಲ್ಲಿ ವರ್ಗಾವಣೆಗೊಂಡು ತೆರಳುತ್ತಿರುವ ಜ್ಯೂ.ಹೆಲ್ತ್ ಇನ್ಸ್ ಪೆಕ್ಟರ್ ಹರೀಶ್ ಎಂ.ಎಸ್. ಅವರ ಸೇವೆಯನ್ನು ಶ್ಲಾಘಿಸಿ ಸನ್ಮಾನಿಸಲಾಯಿತು.
ಗ್ರಂಥಾಲಯ ಕಾರ್ಯದರ್ಶಿ ರವಿ ವಾಣಿನಗರ ಸ್ವಾಗತಿಸಿ, ರಾಜೇಶ್ ಬೈರಡ್ಕ ವಂದಿಸಿದರು. ಗ್ರಂಥಾಲಯ ಸಮಿತಿ ಉಪಾಧ್ಯಕ್ಷೆ ಚಂದ್ರಾವತಿ ಟೀಚರ್ ನಿರೂಪಿಸಿದರು. ಬಳಿಕ ಗದ್ದೆಯಲ್ಲಿ ವಿವಿಧ ಸ್ಪರ್ಧೆಗಳು ಜರಗಿದವು ಸಮರೋಪ ಸಮಾರಂಭದಲ್ಲಿ ಸ್ಪರ್ಧಾ ವಿಜೇತರಿಗೆ ಎಣ್ಮಕಜೆ ಗ್ರಾಮ ಪಂಚಾಯತಿ ಸದಸ್ಯ ಎಸ್.ಬಿ ನರಸಿಂಹ ಪೂಜಾರಿ ಬಹುಮಾನ ವಿತರಿಸಿದರು. ರವಿರಾಜ್ ಎಸ್ ಅಧ್ಯಕ್ಷತೆ ವಹಿಸಿದ್ದರು. ಉಪ ತಹಸಿಲ್ದಾರ್ ಅಬ್ದುಲ್ ಹಮೀದ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡರು.




.jpg)
.jpg)
.jpg)
.jpg)
