ಕುಂಬಳೆ: ಸೀತಾಂಗೋಳಿ ಸಮೀಪದ ಅನಂತಪುರ ವಾರ್ಡಿನ ಪೆರ್ಣೆ ಪರಿಸರದ ಬಿಜೆಪಿ ಕಾರ್ಯಕರ್ತರು ಸಾರ್ವತ್ರಿಕ ಮುಷ್ಕರದ ದಿನವನ್ನು ರುದ್ರಭೂಮಿ ಸ್ವಚ್ಛಗೊಳಿಸುವ ಮೂಲಕ ಜನೋಪಯೋಗಿಯಾಗಿ ಬಳಸಿ ಶ್ಲಾಘನೆಗೊಳಗಾದರು.
ಪೆರ್ಣೆ ಹಿಂದೂ ರುದ್ರಭೂಮಿ ಈ ಪ್ರದೇಶದ ಏಕೈಕ ಸ್ಮಶಾನವಾಗಿದೆ. ಇದರ ಆವರಣದಲ್ಲಿ ಕಾಡು ಬೆಳೆದು ಒಳ ಪ್ರವೇಶಿಸಲು ಅಸಾಧ್ಯ ಪರಿಸ್ಥಿತಿ ನಿರ್ಮಾಣವಾಗಿತ್ತು. ಸಾರ್ವತ್ರಿಕ ಮುಷ್ಕರ ದಿನವನ್ನು ಪ್ರದೇಶದ ಬಿಜೆಪಿ ಕಾರ್ಯಕರ್ತರಲ್ಲಿ ಒಟ್ಟು ಸೇರಿ ಸ್ಮಶಾನದ ಆವರಣ ಪೂರ್ಣ ಸ್ವಚ್ಛಗೊಳಿಸಿದರು. ಸ್ಥಳೀಯರು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.




.jpg)
.jpg)
