ಕಾಸರಗೋಡು: ನಗರದ ಬಾಲಭವನ ಶಾಲೆಯ ವಾರ್ಷಿಕ ಮಹಾಸಭೆ ಶಾಲಾ ಸಭಾಂಗಣದಲ್ಲಿ ಜರುಗಿತು. ಶಾಲಾ ಮುಖ್ಯ ಶಿಕ್ಷಕಿ ಲೀಲಾವತಿ ನಾಯರ್ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಸಲಹೆಗಾರರಾದ ಡಾ. ಕೆ.ಎನ್. ವೆಂಕಟ್ರಮಣ ಹೊಳ್ಳ ಸಮಾರಂಭ ಉದ್ಘಾಟಿಸಿ, ಶಾಲೆಯ ಅಭಿವೃದ್ಧಿ, ಶಾಲಾ ಶಿಕ್ಷಕಿಯರು ವಿದ್ಯಾರ್ಥಿಗಳ ನಡುವಿನ ಸಂವಹನ ರೀತಿ, ಮಕ್ಕಳ ಕಲಿಯುವಿಕೆ, ಶಿಸ್ತು, ಹಿರಿಯರಿಗೆ ಗೌರವ ನೀಡುವುದು ಮಾತ್ರವಲ್ಲದೆ ಇತರ ವಿಷಯಗಳಲ್ಲಿ ಪೆÇೀಷಕರು, ಶಿಕ್ಷಕ ರಕ್ಷಕ ಸಮಿತಿಯ ಪಾತ್ರ ಮುಂತಾದ ವಿಷಯಗಳ ಬಗ್ಗೆ ಮಾಃಇತಿ ನೀಡಿದರು.
ಕಾರ್ಯಕ್ರಮದಲ್ಲಿ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಗುರುದತ್ತ್ ಪೈ, ಉಪಾಧ್ಯಕ್ಷ ಅಬ್ದುಲ್ ಸಲಾಂ ಉಪಸ್ಥಿತರಿದ್ದರು. ಈ ಸಂದರ್ಭ ಶಿಕ್ಷಕ-ರಕ್ಷಕ ಸಮಿತಿಯ ವತಿಯಿಂದ 10 ಬೆಂಚು, ಡಸ್ಕ್, ಕಂಪ್ಯೂಟರ್ ಶಾಲೆಗೆ ಕೊಡುಗೆಯಾಗಿ ನೀಡಲಾಯಿತು. ಶಾಲಾ ಶಿಕ್ಷಕಿಯರು ಪ್ರಾರ್ಥನೆ ಹಾಡಿದರು. ಸುಕನ್ಯಾ ಟೀಚರ್ ಸ್ವಾಗತಿಸಿದರು. ಜಯಂತಿ ಟೀಚರ್ ವಾರ್ಷಿಕ ವರದಿ, ಸುಜಾತ ಟೀಚರ್ ಲೆಕ್ಕಪತ್ರ ಮಂಡಿಸಿದರು. ಸಮಿತಿ ಕೋಶಾಧಿಕಾರಿ ಪ್ರಕಾಶ್ ವಂದಿಸಿದರು.





