ಕಾಸರಗೋಡು: ಆನೆಗುಂದಿ ಶ್ರಿ ಕಾಳಹಸ್ತೇಂದ್ರ ಸ್ವಾಮೀಜಿ ಅವರ ಚಾತುರ್ಮಾಸ್ಯ ವ್ರತಾರಣೆಯ ಪೂರ್ವಭಾವಿಯಾಗಿ ಕಾಸರಗೋಡು ಜಿಲ್ಲೆಯಲ್ಲಿ ಆಯೋಜಿಸಲಾಗಿದ್ದ ಕ್ಷೇತ್ರ ಸಂದರ್ಶನ ಸಂಪನ್ನಗೊಂಡಿತು. ಕೋಟೆಕಾರು, ಬಂಗ್ರಮಂಜೇಶ್ವರ ಆರಿಕ್ಕಾಡಿ ಕಾರ್ಲೆ, ಕಾಞಂಗಾಡು ಕ್ಷೇತ್ರಗಳಲ್ಲಿ ಸಂದರ್ಶನ ಆಯೋಜಿಸಲಾಗಿತ್ತು.
ಕಾಞಂಗಾಡಿನ ಶ್ರೀ ಮತ್ ಪರಶಿವ ವಿಶ್ವಕರ್ಮೇಶ್ವರ ದೇವಸ್ಥಾನಕ್ಕೆ ಆಗಮಿಸಿದ ಶ್ರೀಗಳನ್ನು ಕ್ಷೇತ್ರ ಸಮಿತಿ ಅಧ್ಯಕ್ಷ ಪುರುಷೋತ್ತಮ ಆಚಾರ್ಯ ನೇತೃತ್ವದಲ್ಲಿ ಸ್ವಾಗತಿಸಲಾಯಿತು.
ಆರಿಕ್ಕಾಡಿ ಕಾರ್ಲೆ ಶ್ರೀ ಕಾಳಿಕಾಂಬಾ ದೇವಸ್ಥಾನಕ್ಕೆ ಆಗಮಿಸಿದ ಜಗದ್ಗುರುಗಳವರನ್ನು ದೇವಸ್ಥಾನದ ಅಧ್ಯಕ್ಷ ಜನಾರ್ದನ ಆಚಾರ್ಯ ಆರಿಕ್ಕಾಡಿ ಸ್ವಾಗತಿಸಿದರು, ತಂತ್ರಿ ಪುರೋಹಿತ ರಾಮಕೃಷ್ಣ ಆಚಾರ್ಯ, ದೇವಸ್ಥಾನದ ಆಡಳಿತ ಸಮಿತಿಯ ನವೀನ್ ಆಚಾರ್ಯ ಪ್ರತಾಪ ನಗರ, ಹರಿಶ್ಚಂದ್ರ ಆಚಾರ್ಯ ಬೇಕೂರು,ಶಿವಾನಂದ ಆಚಾರ್ಯ ಪ್ರತಾಪ ನಗರ, ರಾಜೇಶ್ ಆಚಾರ್ಯ ತಾಳಿಪಡ್ಪು, ಶಿವಪ್ರಸಾದ್ ಆಚಾರ್ಯ ಪೆರ್ಲ, ಶ್ರೀಧರ ಆಚಾರ್ಯ ಎಡನೀರು ಸೇರಿದಂತೆ ಆಡಳಿತ ಸಮಿತಿ, ಮಹಿಳಾ ಸಮಿತಿ, ಭಜನಾ ಸಮಿತಿ ಪದಾಧಿಕಾರಿಗಳು ಸದಸ್ಯರು ಉಪಸ್ಥಿತರಿದ್ದರು.
ಕೋಟೆಕಾರು ಶ್ರೀ ಕಾಳಿಕಾಂಬಾ ಕ್ಷೇತ್ರದಲ್ಲಿ ಜಗದ್ಗುರುಗಳವರನ್ನು ದೇವಸ್ಥಾನದ ಅಧ್ಯಕ್ಷ ಸುಂದರ ಆಚಾರ್ಯ ಕೋಟೆಕಾರು ಸ್ವಾಗತಿಸಿದರು. ಬಂಗ್ರಮಂಜೇಶ್ವರ ಶ್ರೀ ಕಾಳಿಕಾ ಪರಮೇಶ್ವರೀ ದೇವಸ್ಥಾನಕ್ಕೆ ಕ್ಷೇತ್ರ ಸಮಿತಿ ಅಧ್ಯಕ್ಷ ಬಿ.ಎಂ ಯದುನಂದನ ಆಚಾರ್ಯ ಅವರ ನೇತೃತ್ವದಲ್ಲಿ ಶ್ರೀಗಳಿಗೆ ಸ್ವಾಗತ ನೀಡಲಾಯಿತು.




